ಹಣ ದ್ವಿಗುಣಗೊಳಿಸುವ ಆಸೆ ತೋರಿಸಿ ವಂಚನೆ

cyber crime
Published on

ರಾಮನಗರ: ಹಣ ದ್ವಿಗುಣಗೊಳಿಸುವ ಆಸೆ ತೋರಿಸಿ ವ್ಯಕ್ತಿಯೊಬ್ಬರಿಂದ 65 ಸಾವಿರ ರೂ.ಗಳನ್ನು ವಂಚಿಸಿರುವ ಪ್ರಕರಣ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.

ರಾಮನಗರದ ರಾಯರದೊಡ್ಡಿ ಸಮೀಪದ ಬಿಜಿಎಸ್ ವೃತ್ತದ ನಿವಾಸಿ ಬಸವರಾಜು ಹಣ ಕಳೆದುಕೊಂಡವರು. ಇನ್‌ಸ್ಟಾ ಗ್ರಾಂ ಖಾತೆಯನ್ನು ನೋಡುತ್ತಿದ್ದ ವೇಳೆ ಬಂದ ಜಾಹೀರಾತನ್ನು ನಂಬಿದ ಇವರು, ಮೊದಲಿಗೆ 5 ಸಾವಿರ ರೂ ಹೂಡಿಕೆ ಮಾಡಿದ್ದು, 8588 ರೂ ಹಣ ವಾಪಾಸಾಗಿದೆ.

ನಂತರ ಹೆಚ್ಚಿನ ಹಣ ಹೂಡಿಕೆ ಮಾಡಿ, ಇದು ಡಾಲರ್ ಆಗಿ ಬದಲಾವಣೆ ಆಗಲಿದ್ದು 10 ಸಾವಿರ ಪಾಯಿಂಟ್ಸ್ ಆದ ನಂತರ ಹಣವನ್ನು ಪಡೆಯಬಹುದು ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಬಸವರಾಜು ಹಂತ ಹಂತವಾಗಿ 65 ಸಾವಿರ ರೂ.ಗಳನ್ನು ವಿವಿ‘ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಮಾತ್ರ ವಾಪಸು ಬರಲೇ ಇಲ್ಲ. ನಂತರ ಮೋಸ ಹೋಗಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net