

ಮೇಲುಕೋಟೆ: ಬಿ.ಇ.ಮೆಕಾನಿಕಲ್ ವಿಭಾಗದಲ್ಲಿ ವಿಟಿಯು ನಡೆಸಿದ ಪದವಿ ಪರೀಕ್ಷೆಯಲ್ಲಿ ಮೇಲುಕೋಟೆಯ ವಿದ್ಯಾರ್ಥಿನಿ ಎಂ.ಎಸ್. ವೈಭವಿ ರಾಜ್ಯಮಟ್ಟದಲ್ಲಿ ನಾಲ್ಕನೇ ರ‌್ಯಾಂಕ್‌ಗಳಿಸಿದ್ದಾಳೆ.
ಇವರು ಇಲ್ಲಿನ ಡೋಲು ವಿದ್ವಾಂಸ ಎಂ.ಎಸ್.ಸಂಜಯ್ ಮತ್ತು ಶೋಭಾ ದಂಪತಿ ಪುತ್ರಿ. ಮಂಡ್ಯದ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯದ 25ನೇ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ಸ್ವೀಕರಿಸಿದರು. ಎಸ್.ಎಸ್. ವೈಭವಿಯನ್ನು ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ.ಆನಂದಾಳ್ವಾರ್ ಹಾಗೂ ಗ್ರಾಮಸ್ಥರು ಅಭಿನಂದಿಸಿದರು.