ಪಶ್ಚಿಮ ಬಂಗಾಳ ರಾಜ್ಯದಿಂದ ಕೂಲಿ ಹರಸಿ ಬಂದಿದ್ದ 7 ಜನರ ಪೈಕಿ ಜಾಯಿದ್ ಅಲಿ, ಶಪೀಜುಲ್ ಶೇಕ್, ಮನ್ರೂಲ್ ಶೇಕ್, ಜಿಯಾಬುರ್ ಶೇಕ್ ಅವರುಗಳು ಶುಕ್ರವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ವಿಪರ್ಯಾಸವೆಂದರೆ ಶಪೀಜುಲ್ ಶೇಕ್, ಜಿಯಾಬುರ್ ಶೇಕ್, ಮನ್ರೂಲ್ ಶೇಕ್ ಒಂದೇ ಕುಟುಂಬದವರಾಗಿದ್ದಾರೆ. ಇನ್ನೂಳಿದ 3 ಮಂದಿಯ ಸ್ಥಿತಿ ಕೂಡ ಚಿಂತಾಜನಕವಾಗಿದೆ.