ನಾಲ್ವರು ಬೇಟೆಗಾರರ ಬಂಧನ

crime
Published on

ಕನಕಪುರ: ವನ್ಯಪ್ರಾಣಿಗಳನ್ನು ಬೇಟೆಯಾಡಿ ಗೂಡ್ಸ್​ ಆಟೋದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ವಾಹನ, ನಾಡ ಬಂದೂಕು ಹಾಗೂ ಕಬ್ಬಿಣದ ಗುಂಡುಗಳು, ಗನ್​ಪೌಡರ್​ಅನ್ನು ವಶಪಡಿಸಿಕೊಂಡಿದ್ದು, ಮೂವರು ಪರಾರಿಯಾಗಿದ್ದಾರೆ.

ಹಾರೋಹಳ್ಳಿ ತಾಲೂಕಿನ ಅಣೆದೊಡ್ಡಿಯ ನಾಗೇಂದ್ರ(37), ನಾರಾಯಣ ಸ್ವಾಮಿ(26), ನಂಜುಂಡಸ್ವಾಮಿ (27), ನವೀನ್​(26) ಬಂಧಿತರು, ನಂಜುಂಡಸ್ವಾಮಿ, ಮುನಿರಾಜು, ಕಾಳಪ್ಪಸ್ವಾಮಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ತಾಲೂಕಿನ ಶಿವನಹಳ್ಳಿಯ ಕನಕಪುರ&-ಸಾತನೂರು ಮುಖ್ಯರಸ್ತೆಯ ಗ್ರಾನೆಟ್​ ಫ್ಯಾಕ್ಟರಿ ಮುಂಭಾಗ, ಗೂಡ್ಸ್​ ಆಟೋದಲ್ಲಿ ವನ್ಯಪ್ರಾಣಿಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯ ಅಧಿಕಾರಿ ವಾಹನ ತಡೆದು ಪರಿಶೀಲಿಸಿದಾಗ ಎರಡು ಮುಳ್ಳು ಹಂದಿ, ಒಂದು ಮೊಲ, ಒಂದು ಕಾಡುಬೆಕ್ಕಿನ ಕಳೇಬರ ಸಿಕ್ಕಿವೆ. ದೂರು ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೈತ್ರಾ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಟಿ.ರವಿ, ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್​, ಗಸ್ತು ಅರಣ್ಯಪಾಲಕ ಅಣ್ಣಯ್ಯ, ಮಲ್ಲಿಕಾರ್ಜುನ್​ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net