ಕುಲು-ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ನಾಲ್ವರು ನಾಪತ್ತೆ

Manali Missing
Published on

ಮೈಸೂರು: ಪ್ಯಾಕೇಜ್​ ಟೂರ್​ ಮೂಲಕ ಕುಲು-ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರು ಮೂಲದ ನಾಲ್ವರು ಪ್ರವಾಸಿಗರು ನಾಪತ್ತೆಯಾಗಿದ್ದಾರೆ.

ಕಾಣೆಯಾಗಿರುವವರು ಶ್ರೀನಿಧಿ, ನವ್ಯ, ವೀರ್​ ಹಾಗೂ ಅವರ ಪತ್ನಿ ಎಂದು ತಿಳಿದು ಬಂದಿದೆ. ಪ್ಯಾಕೇಜ್​ ಟೂರ್​ ಮೂಲಕ ಕುಲು, ಮನಾಲಿ ಪ್ರವಾಸಕ್ಕೆಂದು ಕಳೆದ ಗುರುವಾರ ಮೈಸೂರಿನಿಂದ ಹೊರಟಿದ್ದರು.

Kulu Manali

ಪ್ರವಾಸಕ್ಕೆ ತೆರಳಿದ ಮೇಲೆ ಭಾನುವಾರ ಕೊನೆಯ ಬಾರಿ ಕುಟುಂಬಸ್ಥರ ಸಂಪರ್ಕಕಕ್ಕೆ ಸಿಕ್ಕಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದ್ದು ರೆಡ್​ ಅಲರ್ಟ್​ ಘೋಷಿಸಲಾಗಿದೆ. ನಾವು ಕೊಠಡಿಯ್ಲೇ ಇದ್ದೇವೆ ಎಂದು ಕರೆ ಮಾಡಿದಾಗ ತಿಳಿಸಿದ್ದರು.

ಅದಾದ ಬಳಿಕ ಇದುವರೆಗೂ ಯಾರ ಬಗ್ಗೆಯೂ ಮಾಹಿತಿ ದೊರೆತ್ತಿಲ್ಲ. ಈ ಕುರಿತು ಕುಟುಂಬಸ್ಥರು ಆತಂಕಗೊಂಡಿದ್ದು, ಪ್ರವಾಸಕ್ಕೆಂದು ತೆರಳಿದವರು ಕ್ಷೇಮವಾಗಿ ವಾಪಸ್​ ಬರಲೆಂದು ಕುಟುಂಬಸ್ಥರು ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net