

ರಾಮನಗರ: ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಹಾರೋಹಳ್ಳಿ ತಾಮಸಂದ್ರ ಗೇಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಮೃತಪಟ್ಟಿದ್ದಾರೆ.
ತಾಮಸಂದ್ರ ಗೇಟ್ ಬಳಿ ಇಕೋ ವಾಹನ ಹಾರೋಹಳ್ಳಿ ಕಡೆಯಿಂದ ಹಾಗೂ ಬೈಕ್ ಕನಕಪುರ ಕಡೆಯಿಂದ ಬರುತ್ತಿದ್ದು ಮುಖಾ ಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲಿಯೇ ಮೂರು ಜನ ಸಾವನ್ನಪ್ಪಿದ್ದು ಇವರು ಹಾರೋಹಳ್ಳಿ ಕೈಗಾರಿಕ ಪ್ರದೇಶ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಚನ್ನಪಟ್ಟಣ ಬೇವೂರು ಮಂಡ್ಯದ ಅರುಣ್ ಕುಮಾರ್ (24) ಹಾಗೂ ಹೊರ ರಾಜ್ಯದ ರಾಬಿಬ್ ಮುರ್ಹಾ (25) ಮತ್ತು ಸುಶೀಲ್ ಕುಮಾರ್ (24) ಎಂದು ತಿಳಿದು ಬಂದಿದೆ.
ಮತ್ತೊಂದು ಅಪಘಾತದಲ್ಲಿ ಅಪರಿಚಿತ ವಾಹನ ಡಿಕ್ಕಿಯೊಡೆದು ಬೈಕ್ ಸವಾರ ಮೃತಪಟ್ಟಿದ್ದಾರೆ. ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿಯೊಡೆದಿದೆ. ಬೈಕ್ ಸವಾರ ಕೃಷ್ಣಪ್ಪ ಎನ್ನುವವರು ಮೃತಪಟ್ಟಿದ್ದಾರೆ.
ಎರಡೂ ಪ್ರಕರಣಗಳು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.