ಕುದೂರು: ಮರೂರು ಮುಖ್ಯರಸ್ತೆಯ ಭೈರಾಪುರ ಗೇಟ್ ಬಳಿ ಶುಕ್ರವಾರ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಯುವತಿ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುದೂರಿನಿಂದ ಮರೂರು ಕಡೆ ತೆರಳುತ್ತಿದ್ದ ಬೈಕ್ ಹಾಗೂ ಕುದೂರು ಕಡೆಗೆ ಬರುತ್ತಿದ್ದ ಇನ್ನೊಂದು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಗಾಯಾಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಡಿಕ್ಕಿಯಿಂದ ಎರಡೂ ಬೈಕುಗಳು ನಜ್ಜುಗುಜ್ಜಾಗಿವೆ. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.