ಚಿಂತಾಮಣಿ: ನಗರ ಹೊರವಲಯದ ಕಡಪಾ ಮುಖ್ಯರಸ್ತೆಯ ಚಿನ್ನಸಂದ್ರ ಕ್ರಾಸ್ನಲ್ಲಿ ಗುರುವಾರ ರಾತ್ರಿ ಎರಡು ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ತಾಲೂಕಿನ ಕಸಬಾ ಹೋಬಳಿಯ ಹಾದಿಗೆರೆ ಗ್ರಾಮದ ಮೆಕಾನಿಕ್ ಆಸಿರ್ ಷರೀಫ್ (30), ಕೆಂದನಹಳ್ಳಿಯ ರವಿ(30), ಬಾಬಾಜಾನ್ (33)ಮತ್ತು ದೇವೇಂದ್ರ (30) ಗಾಯಗೊಂಡವರು. ಆಸಿರ್ ಷರೀಫ್ ಮತ್ತು ದೇವೇಂದ್ರ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ಗೆ ಸಾಗಿಸಲಾಗಿದೆ. ಇಬ್ಬರಿಗೆ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಆಸಿರ್ ಷರೀಫ್ ಹಾದಿಗೆರೆ ಗ್ರಾಮಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ ಕೆಂದನಹಳ್ಳಿಯ ರವಿ, ದೇವೇಂದ್ರ ಮತ್ತು ಬಾಬಜಾನ್ ತೆರಳುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.