

ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ಸುರಿದ ಗಾಳಿ ಸಹಿತ ಜೋರು ಮಳೆಗೆ ಅಸ್ತೂರು ಗ್ರಾಮದ ಜಮೀನಿನಲ್ಲಿ 4 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮರೂರು ಗ್ರಾಮದ ಹಳ್ಳದಲ್ಲಿ ಹಸುವೊಂದು ಕೊಚ್ಚಿಗಿದೆ.
ಅಸ್ತೂರು ಗ್ರಾಮದ ಪುಟ್ಟಸ್ವಾಮಪ್ಪ ಎಂಬುವರ ಜಮೀನಿನಲ್ಲಿ 4 ವಿದ್ಯುತ್ ಕಂಬ ನೆಲಕ್ಕುರುಳಿದರೆ, ಮರೂರು ಗ್ರಾಮದ ಮುನೇಶ್ವರ ಸ್ವಾಮಿ ದೇಗುಲದ ಅರ್ಚಕ ಶಿವಮೂರ್ತಿ ಅವರ ಹಸು ಹಳ್ಳದಲ್ಲಿ ಕೊಚ್ಚಿ ಹೋಗಿದೆ.