ಮಹಿಳೆ ಸೇರಿ ನಾಲ್ವರ ಬಂಧನ

2hgr 1
ಗಾಂಜಾ ಸೊಪ್ಪು ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಹಲಗೂರು ಠಾಣೆ ಪೊಲೀಸರು. ಸಿಪಿಐ ಶ್ರೀಧರ್, ಪಿಎಸ್‌ಐ ಬಿ.ಮಹೇಂದ್ರ ಹಾಗೂ ಸಿಬ್ಬಂದಿ ಇದ್ದರು.
Published on

ಹಲಗೂರು: ಸಮೀಪದ ತೊರೆಕಾಡನಹಳ್ಳಿ ಬೆಂಗಳೂರು ಜಲ ಮಂಡಳಿಯ ಗೇಟ್ ಬಳಿ ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ಒಬ್ಬ ಮಹಿಳೆ ಸೇರಿ ನಾಲ್ವರನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ.

ತೊರೆಕಾಡನಹಳ್ಳಿ ಗ್ರಾಮದ ಕುಮಾರ್, ಮಾದಯ್ಯ, ಭರತ್ ಹಾಗೂ ಮಳವಳ್ಳಿಯ ನಿವಾಸಿ ಕಮಲಮ್ಮ ಬಂಧಿತರು. ಇವರು ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹಲಗೂರು ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಧರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ 300 ಗ್ರಾಂ ಗಾಂಜಾ ಸೊಪ್ಪು ಸಮೇತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಹಲಗೂರು ಪಿಎಸ್‌ಐ ಬಿ.ಮಹೇಂದ್ರ, ಸಿಬ್ಬಂದಿ ರಿಯಾಜ್, ನಾಗೇಂದ್ರ, ಸಿದ್ದರಾಜು, ಮಲ್ಲಿಕಾರ್ಜುನ, ಫಾರೂಕ್ ಭಾಗಿಯಾಗಿದ್ದರು. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net