

ಹನೂರು: ತಾಲೂಕಿನ ನಾಲ್‌ರೋಡ್ ಬಳಿ ಮಾರಾಟ ಮಾಡುವ ಉದ್ದೇಶದಿಂದ ಬೈಕ್‌ನಲ್ಲಿ ಒಣ ಗಾಂಜಾವನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬುಧವಾರ ಸಂಜೆ ಡಿವೈಎಸ್ಪಿ ಧರ್ಮೇಂದ್ರ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
ತಾಲೂಕಿನ ಬಿದರಹಳ್ಳಿ ಗ್ರಾಮದ ಮಂಜು, ಹೂಗ್ಯಂ ಗ್ರಾಮದ ರಾಮಕೃಷ್ಣ, ಹೊಸಹಳ್ಳಿ ಗ್ರಾಮದ ಮಹದೇವ ಹಾಗೂ ಮಹದೇವಪ್ರಭು ಬಂಧಿತರು.
ಈ ನಾಲ್ವರು ಸಂಜೆ 7.30ರ ವೇಳೆಯಲ್ಲಿ ಒಣ ಗಾಂಜಾವನ್ನು 2 ಬೈಕ್‌ನಲ್ಲಿ ಸಾಗಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಧರ್ಮೇಂದ್ರ ಪೊಲೀಸ್ ಅಧಿಕಾರಿಗಳೊಂದಿಗೆ ನಾಲ್‌ರೋಡ್ ಬಳಿ ತೆರಳಿ ಬೈಕ್ ತಡೆದು ಪರಿಶೀಲಿಸಿದಾಗ ಗಾಂಜಾ ಇರುವುದು ದೃಢಪಪಟ್ಟಿದೆ. ಚೀಲದಲ್ಲಿದ್ದ 3 ಕೆ.ಜಿ 600 ಗ್ರಾಂ ಒಣ ಗಾಂಜಾ ಹಾಗೂ ಬೈಕ್ ವಶಪಡಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಇನ್‌ಸ್ಪೆಕ್ಟರ್ ಶೇಷಾದ್ರಿ, ಸಬ್‌ಇನ್‌ಸ್ಪೆಕ್ಟರ್ ಲೋಕೇಶ್, ಡಿವೈಎಸ್ಪಿ ನೇತೃತ್ವ ತಂಡದ ಎಎಸೈ ತಖಿವುಲ್ಲಾ, ಸಿಬ್ಬಂದಿ ರವಿಕುಮಾರ್, ವೆಂಕಟೇಶ್, ಕಿಶೋರ್, ಶಿವಕುಮಾರ್ ಹಾಗೂ ಬಿಳಿಗೌಡ ಇದ್ದರು.