ಕಾಡು ಹಂದಿ ಬೇಟೆಯಾಡಿದ್ದ ನಾಲ್ವರ ಬಂಧನ

ಕಾಡು ಹಂದಿ ಬೇಟೆಯಾಡಿದ್ದ ನಾಲ್ವರ ಬಂಧನ
Published on

ಹನೂರು: ತಾಲೂಕಿನ ಪೊನ್ನಾಚಿ ಗ್ರಾಮದ ತೋಟದ ಮನೆಯೊಂದರ ಬಳಿ ಭಾನುವಾರ ಸಂಜೆ ಕಾಡು ಹಂದಿಯನ್ನು ಬೇಟೆಯಾಡಿ ಮಾಂಸವನ್ನು ಸಂಗ್ರಹಿಸಿದ್ದ ನಾಲ್ವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ತಮಿಳುನಾಡಿನ ಕಾರ್ತಿಕ್ ಪೆರುಮಾಳ್, ತಂಗರಾಜ್ ಪೆರುಮಾಳ್, ಮಾದೈಯನ್ ಪಳನಿ ಹಾಗೂ ತಾಲೂಕಿನ ಗೋಪಿನಾಥಂ ಗ್ರಾಮದ ತಂಗರಾಜು ಬಂಧಿತರು.

ಈ ನಾಲ್ವರು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿಯನ್ನು ಭೇಟೆಯಾಡಿ ಇದರ ಮಾಂಸವನ್ನು ಪೊನ್ನಾಚಿ ಗ್ರಾಮದ ಬಸವರಾಜು ಎಂಬುವರ ತೋಟದ ಮನೆಯ ಬಳಿಯಲ್ಲಿ ಸಂಗ್ರಹಿಸಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಶಿವರಾಮು, ವಲಯ ಅರಣ್ಯಾಧಿಕಾರಿ ಕಾಂತರಾಜ ಎಸ್. ಚೌವ್ಹಾಣ, ಗಸ್ತು ಅರಣ್ಯ ಪಾಲಕ ಎಸ್.ಇ ಮಾರುತಿ, ತಮ್ಮಣ್ಣ ಕಲ್ಲೋಳಿ ಹಾಗೂ ಗಂಗಾಧರ ಲಗಳಿ ತಂಡ ದಾಳಿ ನಡೆಸಿದಾಗ ಮಾಂಸ ಸಂಗ್ರಹಿಸಿರುವುದು ದೃಢಪಟ್ಟಿದೆ. ಬಳಿಕ ಮಾಂಸ ಹಾಗೂ ಪರಿಕರಗಳನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ನ್ಯಾಂಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net