ಸುಖ, ಶಾಂತಿಗೆ ಧರ್ಮ ಅನುಸರಣೆ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಶೂಭನುಡಿ ಭಟ್ಕಳ ತಲಗೋಡು ದೇವಸ್ಥಾನ ಗರ್ಭಗುಡಿಗೆ ಶಿಲಾನ್ಯಾಸ

20
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ನಾವೆಲ್ಲ ಸುಖ, ಶಾಂತಿಯನ್ನು ಪಡೆಯಬೇಕಾದರೆ ಧರ್ಮವನ್ನು ಅನುಸರಿಸಬೇಕಾಗುತ್ತದೆ. ಸುಖಸ್ಯಂ ಮೂಲಂ ಧರ್ಮ ಎಂಬಂತೆ ಹಿಂದೆ ಋಷಿ ಮುನಿಗಳು ಸಮಾಜದಲ್ಲಿ ಎಲ್ಲರೂ ಸುಖ ನೆಮ್ಮದಿ ಕಾಣಬೇಕೆಂದು ಹಲವಾರು ದೇವಾಲಯಗಳನ್ನು ನಿರ್ಮಿಸಿ ಧರ್ಮ ಉಳಿಸುವ ಕಾಯಕ ಮಾಡಿದ್ದಾರೆ. ಈ ಪರಂಪರೆಯನ್ನು ನಾವೆಲ್ಲರೂ ಉಳಿಕೊಳ್ಳುವ ಪಯತ್ನ ಮಾಡಬೇಕು ಎಂದು ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಮಠಾಧೀಶ 1008 ಮಹಾ ಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಭಟ್ಕಳದ ತಲಗೋಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.

ಮೀನುಗಾರಿಕೆ, ಬಂದರು ಸಚಿವ ಮಂಕಾಳ ಎಸ್.ವೈದ್ಯ ಮಾತನಾಡಿ, ಈ ಭಾಗದಲ್ಲಿ ನಾನು ಹಲವಾರು ಬಾರಿ ಬಂದಿದ್ದೇನೆ. ಈಲ್ಲಿನ ಶಕ್ತಿ ದೇವತೆಯ ಆಶೀರ್ವಾದದಿಂದ ರಾಜಕೀಯವಾಗಿ ಏಳಿಗೆ ಕಂಡಿದ್ದೇನೆ. ಈ ದೇವಸ್ಥಾನ ನಿರ್ಮಾಣ ಶೀಘ್ರದಲ್ಲಿ ಆಗಲಿದೆ ಎಂದರು.

ಮಾಜಿ ಶಾಸಕ ಸುನೀಲ್ ನಾಯ್ಕ ಮಾತನಾಡಿದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟಿ ತಿಮ್ಮಯ್ಯ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕರಿಯಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನಕ್ಕೆ ಜಾಗ ನೀಡಿದ ಕುಟುಂಬದವರನ್ನು, ಅರ್ಚಕರನ್ನು ಹಾಗೂ ಶಿಲ್ಪಿಗಳನ್ನು ಗೌರವಿಸಲಾಯಿತು. ವಿಠಲ ನಾಯ್ಕ ಸ್ವಾಗತಿಸಿದರು. ಕೆ.ಆರ್.ನಾಯ್ಕ ವಂದಿಸಿದರು.

ನಾವೆಲ್ಲರೂ ಆಧ್ಯಾತ್ಮಿಕತೆ, ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಲು ಸಮಾಜದಲ್ಲಿ ದೇವಾಲಯ ನಿರ್ಮಿಸಬೇಕಾಗಿದೆ. ಭಗವಂತನಲ್ಲಿ ನಾವೆಲ್ಲರೂ ಪೂರ್ತಿ ಶರಣಾದರೆ ದೇವಾಲಯಗಳೂ ತನ್ನಿಂದ ತಾನೆ ನಿರ್ಮಾಣಗೊಳ್ಳುತ್ತವೆ. ಭಕ್ತರಿಂದಲೇ ಭಗವಂತ ನಿರ್ಮಿಸಿಕೊಳ್ಳುತ್ತಾರೆ. ಅದಕ್ಕೆ ಕಾಲ ಕೂಡಿ ಬರಬೇಕು. ಅತೀ ಶೀಘ್ರದಲ್ಲೇ ದೇವಾಲಯ ನಿರ್ಮಾಣ ಆಗಲಿದ್ದು, ಸದ್ಭಕ್ತರು ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net