

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ನರೇಗಾ ಯೋಜನೆ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ 5.20 ಲಕ್ಷ ರೂ. ವೆಚ್ಚದಲ್ಲಿ ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶೌಚಗೃಹ ಕಾಮಗಾರಿಗೆ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಶಿಲಾನ್ಯಾಸಗೈದರು.
ಗ್ರಾ.ಪಂ. ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯರಾದ ವೆಂಕಪ್ಪ ನಾಯ್ಕ, ಇಬ್ರಾಹಿಂ ಪಳ್ಳತ್ತೂರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಸೂಫಿ ಬಾಂಟಡ್ಕ, ಶಿಕ್ಷಣ ತಜ್ಞ ಸದಾಶಿವ ರೈ ನಡುಬೈಲ್, ಮಹಾಬಲ ರೈ ಕರ್ನೂರು, ಸ್ಥಳೀಯರಾದ ಮೊಹಮ್ಮದ್ ಪಳ್ಳತ್ತೂರು, ಶಶಿಕಲಾ ಮಾಧವ ಗೌಡ, ಅಬ್ದುಲ್ ಖಾದರ್ ಗೋಲಿದಡಿ, ಕಾಮಗಾರಿಯ ಗುತ್ತಿಗೆದಾರ ಅಜೀಜ್ ಓಣಿಯಡ್ಕ ಉಪಸ್ಥಿತರಿದ್ದರು.
ಶಾಲಾ ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಶ್ರೀರಾಮ್ ಪಕ್ಕಳ ಸ್ವಾಗತಿಸಿದರು. ಮುಖ್ಯಶಿಕ್ಷಕ ಪ್ರೇಮ್ ಕುಮಾರ್ ವಂದಿಸಿದರು. ಪುರುಷೋತ್ತಮ ಬಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ದೇವಿಪ್ರಕಾಶ್ ಶೆಟ್ಟಿ, ಇಂದಿರಾ, ದಮಯಂತಿ, ಮೋನಿಷಾ, ಮೋಹಿನಿ. ಮೀನಾಕ್ಷಿ, ಹೇಮಾವತಿ ಮತ್ತಿತರರು ಇದ್ದರು.