

ಕಾಸರಗೋಡು: ಕೋಡೋಂಬೇಲೂರು ಗ್ರಾ.ಪಂ. ಕೋಡೋಂನಲ್ಲಿ ಕಾರ್ಯಾರಂಭ ಮಾಡಿರುವ ಸರ್ಕಾರಿ ಐಟಿಐಗೆ ಸ್ವಂತ ಕಟ್ಟಡ ಮಂಜೂರಾಗಿದ್ದು, ಕಾಞಂಗಾಡ್ ಶಾಸಕ ಇ.ಚಂದ್ರಶೇಖರನ್ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿದರು.
ಜಿ.ಪಂ. ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮೀ, ಕೋಡೋಂಬೇಲೂರು ಗ್ರಾಪಂ ಅಧ್ಯಕ್ಷೆ ಪಿ.ಶ್ರೀಜಾ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಎಂ.ಯಮುನಾ, ಜಿ.ಪಂ. ಸದಸ್ಯ ಶಿನೋಜ್ ಚಾಕೋ, ಬ್ಲಾಕ್ ಪಂಚಾಯಿತಿ ಸದಸ್ಯೆ ಟಿ.ವಿ.ಶ್ರೀಲತಾ, ಗ್ರಾ.ಪಂ. ಉಪಾಧ್ಯಕ್ಷ ಪಿ.ದಾಮೋದರನ್, ಗ್ರಾ.ಪಂ. ಸದಸ್ಯರಾದ ಪಿ.ಕುಞಿಕೃಷ್ಣನ್, ಸೂರ್ಯ ಗೋಪಾಲನ್, ಅನೂಪ್ ವಿ.ಕೆ., ಟಿ.ಪಿ.ಮಧು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ.ಗೋವಿಂದನ್, ಟಿ.ಕೆ.ರಾಮಚಂದ್ರನ್, ಎ.ರಾಮಚಂದ್ರನ್, ಪಿ.ಟಿ.ಎ.ಉಪಾಧ್ಯಕ್ಷೆ ಪಿ.ಅನಿತಾ, ವಿ.ಪಂಕಜಾಕ್ಷನ್ ಮೊದಲಾದವರಿದ್ದರು.
ಎಲ್ಎಸ್ಜಿಡಿ ನಿರ್ದೇಶಕ ಆರ್.ಸುಧಾ ಶಂಕರ್ ಸ್ವಾಗತಿಸಿದರು. ಐಟಿಐ ಪ್ರಾಂಶುಪಾಲ ಇ.ಕೆ.ಸುಧೀಶ್ ಬಾಬು ವಂದಿಸಿದರು.