ಮಿಂಚಿಪದವು ಭೋಜನ ಶಾಲೆಗೆ ಶಿಲಾನ್ಯಾಸ

16
Published on

ಮುಳ್ಳೇರಿಯ: ಮಿಂಚಿಪದವು ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರದ ನೂತನ ಭೋಜನ ಶಾಲೆಯ ಶಿಲಾನ್ಯಾಸ ವಾಸುದೇವ ತಂತ್ರಿ ಉಪಸ್ಥಿತಿಯಲ್ಲಿ ರಮಾದೇವಿ ಮತ್ತು ಲಕ್ಷ್ಮೀನಾರಾಯಣ ರಾವ್ ಪಡುಮಲೆ ದಂಪತಿ ನೆರವೇರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಮಧುಸೂಧನ ಆಯರ್ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ವಕೀಲ ದಾಮೋದರನ್ ಶುಭಾಶಂಸನೆಗೈದರು. ಎನ್.ರಾಮಚಂದ್ರ, ರಾವ ಎಂ.ಎನ್., ಗೀತಾ ದಾಮೋದರನ್, ಜಯಕರ, ಮನೋಜ್ ಎಂ.ಸಿ. ಮೊದಲಾದವರಿದ್ದರು. ವಕೀಲ ಶಿವರಾಮ ಮಣಿಯಾಣಿ ಸ್ವಾಗತಿಸಿದರು. ಜೀರ್ಣೋದ್ಧಾರ ಬ್ರಹ್ಮಕಲಶ ಸಮಿತಿ ಖಜಾಂಚಿ ನಾರಾಯಣ ಕೇಕಡ್ಕ ನಿರೂಪಿಸಿದರು. ಚಂದ್ರಶೇಖರ ಎಂ.ಎನ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net