ಬೆಳ್ಳಾಯರು ಮೂಲಸ್ಥಾನ ಕಾಮಗಾರಿಗೆ ಶಂಕುಸ್ಥಾಪನೆ

36
Published on

ಮೂಲ್ಕಿ: ಕೆ.ಎಸ್.ರಾವ್ ನಗರ ಬೆಳ್ಳಾಯರು ಗೋಂಟು ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನದ ಎರಡನೇ ಹಂತದ ಸುಮಾರು 67 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.

ಶ್ರೀ ಮೂಲಸ್ಥಾನ ಸಮಿತಿ ಅಧ್ಯಕ್ಷ ಸೂರ್ಯ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಮೂಲಸ್ಥಾನದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ದಿನೇಶ್ ಪುತ್ರನ್ ಕರ್ನಿರೆ, ಶೇಖರ್ ಪುತ್ರನ್ ಮಲ್ಪೆ, ಮಹಿಳಾ ಸಮಿತಿ ಅಧ್ಯಕ್ಷೆ ಆಶಾ ಪುತ್ರನ್, ಹಿರಿಯರಾದ ಎ.ಕೆ.ಅಯ್ಯ, ಕೆಎಸ್ ರಾವ್ ನಗರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಬಲ ಸನಿಲ್, ಮುರಳೀದಾಸ್ ಭಟ್, ಹಯಗ್ರೀವ ಪಡ್ಡಿಲ್ಲಾಯ ಉಪಸ್ಥಿತರಿದ್ದರು.

ನವೀನ್ ಪುತ್ರನ್ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಾಂಚನ್ ವಂದಿಸಿದರು. ಕ್ಷೇತ್ರದ ತಂತ್ರಿ ವೆಂಕಟರಾಜ ಉಡುಪ ಶಂಕುಸ್ಥಾಪನೆ ಧಾರ್ಮಿಕ ವಿಧಿ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net