

ಉಳ್ಳಾಲ: ಅದೆಷ್ಟೋ ಮಂದಿಗೆ ನಾಟ್ಯ ಶಿಕ್ಷಣ ನೀಡಿರುವ ಮೋಹನ್ ಕುಮಾರ್ ಭರತನಾಟ್ಯ ರಂಗಕ್ಕೆ ನೀಡಿರುವ ಕೊಡುಗೆ ಶ್ರೇಷ್ಠ. ಅವರ ಸೇವೆ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಗುರುಪೂರ್ಣಿಮಾ ಪ್ರಯುಕ್ತ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ್ ಕುಮಾರ್ ಅವರಿಗೆ ಗುರುವಾರ ಕೊಲ್ಯದ ಅವರ ಮನೆಯಲ್ಲಿ ಗುರುವಂದನೆ ಸಲ್ಲಿಸಿ ಮಾತನಾಡಿದರು.
ಗುರುಪೂರ್ಣಿಮೆ ಪ್ರಯುಕ್ತ ದೇಶಾದ್ಯಂತ ಪ್ರತಿಜಿಲ್ಲೆಯಲ್ಲೂ ತಮಗಿಷ್ಟ ಪಾತ್ರರಾದ ಗುರುಗಳನ್ನು ಗುರುತಿಸಿ ವಂದನೆ ಸಲ್ಲಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ಮೇರೆಗೆ ಕಾರ್ಯಕ್ರಮ ನಡೆಸಲಾಗಿದೆ. ಮೋಹನ್ ಕುಮಾರ್ ಅವರು ನಾಟ್ಯ ರಂಗದಲ್ಲಿ ಎಷ್ಟೇ ಸಾಧನೆ ಮಾಡಿದರೂ ವಿದೇಶಕ್ಕೆ ಹೋಗದೆ ನಮ್ಮದೇ ಕ್ಷೇತ್ರದಲ್ಲೇ ನೆಲೆಸಿದ್ದು ಅವರ ಸರಳತೆಗೆ ಸಾಕ್ಷಿ ಎಂದರು.
ಮುಖಂಡರಾದ ದಯಾನಂದ ತೊಕ್ಕೊಟ್ಟು, ಪುರುಷೋತ್ತಮ ಗಟ್ಟಿ ಪರ್ಯತ್ತೂರು, ಅನಿಲ್ ಕೊಲ್ಯ, ಜಯಪೂಜಾರಿ, ಸೋಮಾ ಸುಭಾಷಿಣಿ, ಹರೀಶ್ ಅಂಬ್ಲಮೊಗರು, ಹರೀಶ್ಚಂದ್ರ ಅಡ್ಕ, ಜೀವನ್ ಕುಮಾರ್ ತೊಕ್ಕೊಟ್ಟು, ರಾಜೇಶ್ ಕೊಲ್ಯ, ಗಣೇಶ್ ಕಾಪಿಕಾಡು, ದೀಕ್ಷಿತ್ ನಿಸರ್ಗ, ಹರಿಣಿ ಕೋಟ್ಯಾನ್, ಕಿಶೋರ್ ಮುನ್ನೂರು, ಚೇತನ್ ಕುಂಪಲ, ಶಶಿಕುಮಾರ್ ಪರ್ಯತ್ತೂರು, ನಿವೃತ್ತ ಯೋಧ ಕೃಷ್ಣ ಬಿ.ಎಂ. ಮೊದಲಾದವರು ಉಪಸ್ಥಿತರಿದ್ದರು. ರವಿಶಂಕರ್ ಸೋಮೇಶ್ವರ ನಿರೂಪಿಸಿದರು.