ನೂತನ ದೇವಸ್ಥಾನಕ್ಕೆ ಶೀಘ್ರದಲ್ಲಿ ಶಿಲಾನ್ಯಾಸ

kon
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಕೊಕ್ಕರ್ಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅತ್ಯಂತ ಪುರಾತನ ದೇವಸ್ಥಾನವಾಗಿದ್ದು, ರಸ್ತೆ ಅಗಲೀಕರಣದಿಂದ ದೇವಸ್ಥಾನದ ಪಕ್ಕದಲ್ಲಿರುವ ಕೊಕ್ಕರ್ಣೆ ಅರಮನೆಯವರು ನೀಡಿದ ಭೂಮಿಯಲ್ಲಿ ಶೀಘ್ರದಲ್ಲಿ ನೂತನ ದೇವಸ್ಥಾನಕ್ಕೆ ಶಿಲಾನ್ಯಾಸ ಮಾಡಲಾಗುವುದು ಎಂದು ಶರನ್ನವರಾತ್ರಿ ಉತ್ಸವ ಸಮಿತಿ ಗೌರವಾಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಹೇಳಿದರು.

ಕೊಕ್ಕರ್ಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊಕ್ಕರ್ಣೆ ದಸರಾ ಕಾರ್ಯಕ್ರಮ ಶರನ್ನವರಾತ್ರಿ ಉತ್ಸವ ಸಮಿತಿ ವತಿಯಿಂದ 33ನೇ ವರ್ಷದ ಶರನ್ನವರಾತ್ರಿ ಮಹೋತ್ಸವ, ನಾಲ್ಕನೇ ವರ್ಷದ ಶಾರದೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟನೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್ ಉಡುಪಿ, ಗುರುಪ್ರಸಾದ್ ಮಂದಾರ್ತಿ, ಎಕ್ಸಲೆಂಟ್ ವಿದ್ಯಾಸಂಸ್ಥೆ ಸುಣ್ಣಾರಿಯ ಮಹೇಶ್ ಹೆಗ್ಡೆ, ಬೆಂಗಳೂರು ಸಂಯಮ ವೆಲ್‌ನೆಸ್ ಚಾರಿಟೆಬಲ್ ಟ್ರಸ್ಟ್ ಡಾ.ರಾಧಕೃಷ್ಣ ನಾಯಕ್, ಶರನ್ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ಶ್ಯಾನುಭಾಗ್, ಸಂಚಾಲಕಿ ಡಾ.ಸುನೀತಾ ಡಿ.ಶೆಟ್ಟಿ, ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಹರೀಶ್ ಶ್ಯಾನುಭಾಗ್ ಸ್ವಾಗತಿಸಿದರು. ರಮೇಶ್ ಕೋಟಂಬೈಲು, ಗಣೇಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಆಚಾರ್ ಮತ್ತು ಅರುಣ್ ಜೋಗಿ ವಂದಿಸಿದರು. ಚಂದ್ರಹಾಸ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಡ್ಲ ಪಾಂಚಜನ್ಯ ಪ್ರತಿಷ್ಠಾನದ ಕಲಾವಿದರಿಂದ ಶ್ರೀ ಮಂಗಳಾಪುರದ ಮಂಗಳಾಂಬೆ ಪೌರಾಣಿಕ ನೃತ್ಯ ನಾಟಕ, ರಾತ್ರಿ ಪೂಜೆ, ಪ್ರಸಾದ ವಿತರಣೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net