

ವಿಜಯವಾಣಿ ಸುದ್ದಿಜಾಲ ಉಡುಪಿ
ಭೂಮಿಯಲ್ಲಿ ಮುಕ್ಕಾಲು ಭಾಗ ಜಲವೇ ಆವೃತವಾಗಿದ್ದರೂ ಅವೆಲ್ಲವೂ ಕುಡಿಯಲು ಯೋಗ್ಯವಾಗಿಲ್ಲ. ಬದುಕಿಗೆ ನೆಲೆ ಒದಗಿಸಿದ ಹಾಗೂ ಇರುವ ಅಲ್ಪ ಭಾಗದ ನೀರನ್ನು ಬರಿದಾಗದಂತೆ ಕಾಯ್ದುಕೊಳ್ಳದಿದ್ದರೆ ನೀರಿಗಾಗಿ ಕಣ್ಣೀರಿಡುವ ದುರಂತ ಕಾಲ ಬಹಳ ದೂರವಿಲ್ಲ ಎಂದು ಜಲ ಜೀವನ ಮಿಷನ್ನ ರಾಜ್ಯ ಸಂಪನ್ಮೂಲ ವ್ಯಕ್ತಿ, ರತ್ನಶ್ರೀ ಜೊಸೆಫ್ ಜಿ.ಎಂ. ರೆಬೆಲ್ಲೋ ಅಭಿಪ್ರಾಯಪಟ್ಟರು.
ಜಲ ಜೀವನ ಮಿಷನ್ನ ಐಎಸ್ಎ ಟೀಮ್ ಲೀಡರ್ ಉಷಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸೌಮ್ಯಲತಾ ಪಿ., ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ರಾ.ಸೇ.ಯೋ. ಮತ್ತು ಯೂತ್ ರೆಡ್ಕ್ರಾಸ್ ಕಾರ್ಯಕ್ರಮಾಧಿಕಾರಿ ನಂದೀಶಕುಮಾರ್ ಕೆ.ಸಿ., ವಿದ್ಯಾರ್ಥಿ ನಾಯಕ ಈರಬಸು ಉಪಸ್ಥಿತರಿದ್ದರು.
ಸುಹಾ ಸ್ವಾಗತಿಸಿದರು. ಯಮನಪ್ಪ ಪರಿಚಯಿಸಿದರು. ಖುಷಿ ವಂದಿಸಿದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.
ನಮ್ಮ ಹಿರಿಯರು ನೀರನ್ನೂ ಸಹ ನಿಧಿಯಂತೆ ಕಾಯ್ದುಕೊಳ್ಳುತ್ತಿದ್ದರು. ಅದಕ್ಕೆ ಆಸ್ತಿಕತೆಯ ಆವರಣ ಬೆಸೆದು, ಮಳೆನೀರು ಕೊಯ್ಲಿನ ನಿಸರ್ಗ ಸಹಜ ಮಾದರಿಗಳಾದ ಹುತ್ತಗಳನ್ನು ಜತನವಾಗಿಟ್ಟುಕೊಂಡಿದ್ದರು. ನೀರು ಅಮೂಲ್ಯ. ಅದರ ಅರಿವು ಎಲ್ಲರಿಗೂ ಇರಬೇಕು.| ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಕಾಲೇಜಿನ ಪ್ರಾಂಶುಪಾಲ