ಬಸ್ಸು ನಿಲ್ದಾಣ, ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಶಿಲಾನ್ಯಾಸ

Mbd_Shilanyasa
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಶಿರ್ತಾಡಿಯಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ, ವಾಣಿಜ್ಯ ಸಂಕೀರ್ಣ ಕಟ್ಟಡ ಶಿಲಾನ್ಯಾಸ, ಸಂಜೀವಿನಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಶಿರ್ತಾಡಿಯ ಪೇಟೆಯಲ್ಲಿ ನಡೆಯಿತು.

ಶಿರ್ತಾಡಿ ಗ್ರಾಪಂ ಅಧ್ಯಕ್ಷ ಆಗ್ನೇಸ್ ಡಿಸೋಜ ಅಧ್ಯಕ್ಷತೆ ವಹಿಸಿ, ಸಂಜೀವಿನಿ ಕಟ್ಟಡ ಉದ್ಘಾಟಿಸಿದರು.ಸದಸ್ಯ ಎಸ್.ಪ್ರವೀಣ್ ಕುಮಾರ್ ಬಸ್ಸು ನಿಲ್ದಾಣ, ವಾಣಿಜ್ಯ ಸಂಕೀರ್ಣ ಕಟ್ಟಡದ ಶಿಲಾನ್ಯಾಸಗೈದರು.

ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ ಮಾತನಾಡಿ, ಶಿರ್ತಾಡಿ ಧರ್ಮ ಸಾಮ್ರಾಜ್ಯರು ಪಂಚಾಯಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಸ್ ನಿಲ್ದಾಣ, ವೈದ್ಯರ ವಸತಿ ನಿಲಯ, ಅರಣ್ಯ, ಕೃಷಿ, ಮೆಸ್ಕಾಂನ ಸೆಕ್ಷನ್ ಕಚೇರಿ ಮುಂತಾದ ಅಗತ್ಯ ಸರ್ಕಾರಿ ಕಚೇರಿಗಳಿಗೆ ಜಾಗ ಗುರುತಿಸಿ ಮೀಸಲಿಟ್ಟಿದ್ದರು ಎಂದರು.

ಪಂಚಾಯಿತಿ ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಪಂಚಾಯಿತಿ ಹವಾನಿಯಂತ್ರಿತ ಸುಸಜ್ಜಿತ ಕಟ್ಟಡ, ಹೈಬ್ರಿಡ್ ಸೋಲಾರ್, ಕೂಡು ರಸ್ತೆಗಳಲ್ಲಿ ಸಿಸಿ ಕ್ಯಾಮರಾ, ಕಸ ವಿಲೇವಾರಿ ವಾಹನ ಸಹಿತ ಅಗತ್ಯ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಮುತುವರ್ಜಿ ವಹಿಸಿರುವುದಾಗಿ ತಿಳಿಸಿದರು. ಗ್ರಾಮದ ಜನರ ಬಹುವರ್ಷಗಳ ಬೇಡಿಕೆಯನ್ನು ಸುಸಜ್ಜಿತವಾಗಿ ರೂಪಿಸಲು ಪಣತೊಟ್ಟಿರುವುದಾಗಿ ತಿಳಿಸಿದರು.

ಉಮೇಶ್ ಭಟ್ ಪೂಜಾ ವಿಧಿ-ವಿಧಾನ ನೆರವೇರಿಸಿದರು. ಭುವನಜ್ಯೋತಿ ವಸತಿ ಶಾಲೆ ಪ್ರಾಂಶುಪಾಲ ಪ್ರಶಾಂತ್ ಡಿಸೋಜ, ನವಮೈತ್ರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಸತೀಶ್ ವಿ.ಶೆಟ್ಟಿ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ನಳಿನಿ ರಮೇಶ್, ಪಿಡಿಒ ದಾಮೋದರ್, ಸದಸ್ಯರಾದ ಲತಾ ಹೆಗ್ಡೆ, ನಾಗವೇಣಿ, ಸಂತೋಷ್ ಶೆಟ್ಟಿ, ರಾಜೇಶ್ ಡಿಸೋಜ, ಗುತ್ತಿಗೆದಾರ ಅಜಯ್, ದೀಕ್ಷಿತ್ ಶೆಟ್ಟಿ, ದಿನೇಶ್ ಶೆಟ್ಟಿ ತಿಮಾರ್, ಶಶಿಕಲಾ, ದೇವಕಿ, ಶೀನ ಉಪಸ್ಥಿತರಿದ್ದರು. ಪ್ರತಿಭಾ ಸ್ವಾಗತಿಸಿದರು. ಅಕ್ಷಯ್ ವಂದಿಸಿದರು. ಜಗದೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net