

ಬಂಟ್ವಾಳ: ಪಾಣೆಮಂಗಳೂರು ಜೈನರ ಪೇಟೆಯ ಪುರಾತನ 1008 ಶ್ರೀ ಅನಂತನಾಥ ತೀರ್ಥಂಕರ, 1008 ಶ್ರೀ ಚಂದ್ರನಾಥ ತೀರ್ಥಂಕರ, ಮಹಾ ಮಾತೆ ಪದ್ಮಾವತಿ ದೇವಿ ಜಿನ ಚೈತ್ಯಾಲಯದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ತ್ಯಾಗಿ ನಿವಾಸ, ಸಭಾಭವನ, ಭೋಜನ ಶಾಲೆ, ತಡೆಗೋಡೆ ನಿರ್ಮಾಣದ ಶಿಲಾನ್ಯಾಸ ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ, ವಾಸ್ತು ತಜ್ಞ ಸುದರ್ಶನ ಇಂದ್ರ ನೇತೃತ್ವದಲ್ಲಿ ನಡೆಯಿತು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರಿನ ಶ್ರೀ ಬ್ರಹ್ಮದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ರತ್ನಾಕರ್ ಜೈನ್ ಮಂಗಳೂರು, ಮಂಗಳೂರಿನ ವಕೀಲ ಜಿನೇಂದ್ರ ಕುಮಾರ್ ಮಾತನಾಡಿದರು. ಹರ್ಷರಾಜ ಬಳ್ಳಾಲ್ ಸ್ವಾಗತಿಸಿದರು, ದೀಪಕ್ ಕುಮಾರ್ ಇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಸ್ ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.