ಸಾಲಬಾಧೆ ತಾಳದೆ ಮೋತಿರಾಮ ತಾಂಡಾ ರೈತ ಆತ್ಮಹತ್ಯೆ

crime
Published on


ಚಿಂಚೋಳಿ: ಚೆಂಗಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋತಿರಾಮ ತಾಂಡಾ ರೈತ ಸಾಲಬಾಧೆಯಿಂದ ವಿಷಸೇವಿಸಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಂಕರ ಗುರುನಾಥ ರಾಠೋಡ್ (೪೫) ಸಾವಿಗೆ ಶರಣಾದವ. ೨ ಎಕರೆ ಜಮೀನಿದ್ದು, ಸೊಂತ ಗ್ರಾಮದ ಪಿಕೆಜಿಬಿಯಲ್ಲಿ ಒಂದು ಲP್ಷÀದ ಜತೆಗೆ ಖಾಸಗಿ ಸಾಲವೂ ಮಾಡಿಕೊಂಡಿದ್ದ. ಉತ್ತಮ ಇಳುವರಿ ಬಾರದ ಕಾರಣ ಹೊಲದಲ್ಲೇ ವಿಷಸೇವಿಸಿದ್ದಾನೆ. ಪತ್ನಿ ಇಮ್ಲಿಬಾಯಿ ನೀಡಿದ ದೂರಿನನ್ವಯ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net