ಮಹರ್ಷಿ ಮನುಕುಲಕ್ಕೆ ಮಾದರಿ

Untitled design (7)
ಮಸ್ಕಿ ತಾಲ್ಲೂಕಿನ ಚಿಲ್ಕರಾಗಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನೂತನ ನಾಮಫಲಕವನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಉದ್ಘಾಟನೆಗೊಳಿಸಿದರು. ಪ್ರಮುಖರಾದ ಅಯ್ಯಪ್ಪ ಮ್ಯಾಕಲ್, ಆರ್.ಕೆ.ನಾಯಕ, ಭೀಮಣ್ಣ ಕಾಚಾಪೂರು, ಯಂಕಪ್ಪ ತಳವಾರರ, ಗೇಣಪ್ಪ ಸುಣಗಾರ, ಅಂಬಪ್ಪ ತಳವಾರ, ದುರುಗಪ್ಪ ಬೆಂಚಮಟ್ಟಿ ಇನ್ನಿತರರಿದ್ದರು.
Published on

ಮಸ್ಕಿ: ತಾಲ್ಲೂಕಿನ ಚಿಲ್ಕರಾಗಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನೂತನ ನಾಮಫಲಕವನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸೋಮವಾರ ಉದ್ಘಾಟನೆ ಮಾಡಿದರು.

ಮಹರ್ಷಿ ವಾಲ್ಮೀಕಿ ನಾಮಫಲಕ ಅನಾವರಣ

ಮಹರ್ಷಿ ವಾಲ್ಮೀಕಿ ಅವರು ಇಡೀ ದೇಶ ಕೊಂಡಾಡುವಂತ ರಾಮಾಯಣವನ್ನು ರಚಿಸಿ ಮನುಕುಲಕ್ಕೆ ಮಾದರಿಯಾದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಯುವಕರು ವ್ಯಸನಗಳಿಂದ ಮುಕ್ತರಾಗಬೇಕು. ರಾಮಾಯಣ ಮಹಾಭಾರತ ಹಾಗೂ ಆಧುನಿಕ ಸಾಹಿತ್ಯವನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಾಲ್ಮೀಕಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಅಯ್ಯಪ್ಪ ಮ್ಯಾಕಲ್, ತಾಲ್ಲೂಕು ಮುಖಂಡಾದ ಆರ್.ಕೆ.ನಾಯಕ, ಭೀಮಣ್ಣ ಕಾಚಾಪೂರು, ಯಂಕಪ್ಪ ತಳವಾರರ, ಗೇಣಪ್ಪ ಸುಣಗಾರ, ಅಂಬಪ್ಪ ತಳವಾರ, ದುರುಗಪ್ಪ ಬೆಂಚಮಟ್ಟಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net