

ಬದಿಯಡ್ಕ: ಆಶ್ರಯ ಆಶ್ರಮವನ್ನು ಸ್ಥಾಪಿಸಿದ ಶಾರದಾ ಅವರಿಗೆ ಹಿಂದು ಸಮಾಜದ ಮೇಲಿದ್ದ ಅಭಿಮಾನ ವರ್ಣಿಸಲು ಅಸಾಧ್ಯ. ಅವರ ಅಗಲಿಕೆಯ ನಂತರ ಇಲ್ಲಿ ಹಿಂದು ಸಂಸ್ಕಾರದ ಆಚಾರ-ವಿಚಾರ ನಡೆಯುತ್ತಿವೆ. ಆಶ್ರಮದ ಏಳಿಗೆಯಲ್ಲಿ ಒಂದಷ್ಟು ಜನ ತೊಡಗಿಸಿಕೊಂಡಿದ್ದಾರೆ ಎಂದು ಮಿಜೋರಾಂ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಹೇಳಿದರು.
ನೀರ್ಚಾಲು ಸಮೀಪದ ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಮಾತನಾಡಿದರು.
ಆಶ್ರಮದ ಪರವಾಗಿ ಉದ್ಯಮಿ ಶಿವಶಂಕರ ನೆಕ್ರಾಜೆ ಅವರನ್ನು ಗೌರವಿಸಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಆಶ್ರಯ ಆಶ್ರಮದ ಕಾರ್ಯದರ್ಶಿ ರಮೇಶ್ ಕಳೇರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ರಾಮಕೃಷ್ಣ ಹೆಬ್ಬಾರ್, ಶ್ರೀಧರ ಮಜಲು ಮೊದಲಾದವರು ಉಪಸ್ಥಿತರಿದ್ದರು. ಕುಮ್ಮನಂ ರಾಜಶೇಖರನ್, ಗಣ್ಯರು ಗೋವುಗಳಿಗೆ ಗೋಗ್ರಾಸ ನೀಡಿದರು.