ಆರ್​ಎಸ್​ಎಸ್​ ಗಣವೇಷ ಧರಿಸಿದ ಜೆಡಿಎಸ್​ ಮಾಜಿ ಶಾಸಕ!

Published on

 ಆ.2ರ ಕಾರ್ಯಕ್ರಮಕ್ಕೆ ಆಹ್ವಾನಿಸಿದ ವಿಡಿಯೋ ವೈರಲ್​

ಬಿಡದಿ: ಪಟ್ಟಣದಲ್ಲಿ ಆ.2ರಂದು ಆಯೋಜನೆಗೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೇಶಭಕ್ತರು ಆಗಮಿಸಬೇಕು ಎಂದು ಜೆಡಿಎಸ್​ ಮಾಜಿ ಶಾಸಕ ಎ.ಮಂಜುನಾಥ್​ ಗಣವೇಷ ಧರಿಸಿ ವಿಡಿಯೋ ಮೂಲಕ ಕರೆ ನೀಡಿದ್ದು, ಕ್ಷೇತ್ರದಲ್ಲಿ ಹೊಸ ರಾಜಕೀಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

ವಿಡಿಯೋದಲ್ಲಿ ಏನಿದೆ?: ರಾಷ್ಟ್ರೀಯ ಸ್ವಯಂಸೇವಕ ಸಂ ಸ್ಥಾಪನೆಯಾಗಿ ಅಕ್ಟೋಬರ್​ 2ಕ್ಕೆ 100 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಅಂದು ಬಿಡದಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದೇಶಭಕ್ತರು ಗಣವೇಷಧಾರಿಗಳಾಗಿ ಬರಬೇಕು ಎಂದು ಮಂಜುನಾಥ್​ ವಿಡಿಯೋದಲ್ಲಿ ತಿಳಿಸಿದ್ದಾರೆ. ಗಣವೇಷಧರಿಸಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಈ ಕುರಿತಂತೆ ವಿಜಯವಾಣಿಯೊಂದಿಗೆ ಮಾತಾನಾಡಿದ ಎ.ಮಂಜುನಾಥ್​, ಇದೊಂದು ಐತಿಹಾಸಿಕ ಕಾರ್ಯಕ್ರಮ. ಒಂದು ರಾಷ್ಟ್ರೀಯ ಸಂ ಶತಮಾನ ಪೂರೈಸುತ್ತಿದ್ದು, ಈ ಸಂಭ್ರಮದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಿ ಎಂದು ಸಾಮಾನ್ಯ ವ್ಯಕ್ತಿಯಾಗಿ ಮನವಿ ಮಾಡಿದ್ದೇನೆ ಹೊರತು ಇದರಲ್ಲಿ ಯಾವುದೇ ಚರ್ಚೆಗೆ ಗ್ರಾಸವಾಗುವ ವಿಚಾರಗಳಿಲ್ಲ. ನಾನು ಗಣವೇಷಧರಿಸಿದ್ದಕ್ಕೆ ಹೆಚ್ಚಿನ ಮಹತ್ವ ಕೊಡುವುದೂ ಬೇಡ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net