ಕೊಪ್ಪಳದಲ್ಲಿ ಗುಡುಗು ಸಹಿತ ಭಾರೀ ಮಳೆ: ಸಿಡಿಲು ಬಡಿದು ರೈತ ಸಾವು, ಬಾಲಕ ಪ್ರಾಣಾಪಾಯದಿಂದ ಪಾರು

Former death
Published on

ಕೊಪ್ಪಳ: ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಸಿಡಿಲು ಬಡಿದು ಸಾವನ್ನಪ್ಪಿದ್ದು, ಆತನ ಮೊಮ್ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕೊಪ್ಪಳ ತಾಲೂಕಿನ ಇಂದರಗಿ ಕ್ರಾಸ್​ ಬಳಿ ಈ ಘಟನೆ ನಡೆದಿದ್ದು,ಮಳೆಯಿಂದ ರಕ್ಷಿಸಿಕೊಳ್ಳಲು ಪಕ್ಕದಲ್ಲೇ ಇದ್ದ ಮರದ ಆಶ್ರಯ ಪಡೆಯಲು ಹೋಗುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಪರಿಣಾಮ ರೈತ ಶಿವಪ್ಪ ಕಾಸನಕಂಡಿ(65) ಅಲ್ಲೇ ಸಾವನ್ನಪ್ಪಿದ್ದಾರೆ.

ಭಾನುವಾರ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಜೋರಾಗಿ ಮಳೆ ಬೀಳುತ್ತಿತ್ತು. ಮೊಮ್ಮಗನ ಜತೆ ಹೊಲಕ್ಕೆ ಬಂದಿದ್ದ ರೈತ ಅದೇ ಮರದಡಿ ನಿಂತಿದ್ದ. ಅದೃಷ್ಟವಶಾತ್​​ ಆತನಿಗೆ ಏನೂ ಆಗಿಲ್ಲ. ಸಿಡಿಲು ಬಡಿದ ಶಬ್ದಕ್ಕೆ ತಕ್ಷಣವೇ ಮರದಿಂದ ಬಾಲಕ ಓಡಿಹೋಗಿ ಪ್ರಾಣರಕ್ಷಿಸಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net