ಬಾಳ್ತಿಲದಲ್ಲಿ ತಿತಿಲಿ ಯೂನಿಟ್ ರಚನೆ

New Project
Published on

ಬಂಟ್ವಾಳ: ಪಂಡಿತ್ ಜವಾಹರ್‌ಲಾಲ್ ನೆಹರು ಪುಣ್ಯಸ್ಮರಣೆ ಪ್ರಯುಕ್ತ ದ.ಕ ಜಿಲ್ಲಾ ಜವಾಹರ್ ಬಾಲ್ ಮಂಚ್ ವತಿಯಿಂದ ಜಿಲ್ಲಾಧ್ಯಕ್ಷೆ ಶೈಲಜಾ ರಾಜೇಶ್ ನೇತೃತ್ವದಲ್ಲಿ ಮಂಗಳವಾರ ಬಾಳ್ತಿಲದಲ್ಲಿ ತಿತಿಲಿ ಯೂನಿಟ್ ರಚಿಸಲಾಯಿತು.

18 ವರ್ಷದ ಕೆಳಗಿನ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಯಿತು. ಸದರಿ ವರ್ಷದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶ್ರೇಯಾ, ಶ್ರವಣ್, ಶೌರ್ಯ, ಆರಾಧ್ಯ, ದಯನೀತ ಅವರನ್ನು ಸನ್ಮಾನಿಸಲಾಯಿತು.

ಶ್ರೇಷ್ಠ, ಮೋಕ್ಷಿತಾ ಇಂಚರ, ಇಶಾನಿ, ಶ್ರವಣ್, ಶ್ರೇಯಾ ಕಾರ್ಯಕ್ರಮ ಉದ್ಘಾಟಿಸಿದರು. ಬಾಲ ಮಂಚ್ ಜಿಲ್ಲಾಧ್ಯಕ್ಷೆ ಶೈಲಜಾ ರಾಜೇಶ್ ಮಾತನಾಡಿದರು. ಡಾ.ರಾಜೇಶ್ ಪೂಜಾರಿ, ಚಂದ್ರಾವತಿ, ಅನ್ನಪೂರ್ಣ, ಸುಲೋಚನಾ, ಶಾರದಾ, ಜಯಂತಿ, ವಿನಯ ಉಪಸ್ಥಿತರಿದ್ದರು. ಪುಣ್ಯಸ್ಮರಣೆ ಪ್ರಯುಕ್ತ ಭಜನಾ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net