ಜಿಲ್ಲಾಮಟ್ಟದ ಓಣಂ ಆಚರಣ ಸಮಿತಿ ರಚನೆ : ಅಧ್ಯಕ್ಷರಾಗಿ ಶಾಸಕ ರಾಜಗೋಪಾಲನ್ ಆಯ್ಕೆ

New Project (10)
Published on

ಕಾಸರಗೋಡು: ರಾಜ್ಯ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವತಿಯಿಂದ ಚೆರುವತ್ತೂರಿನಲ್ಲಿ ಸೆ.1ರಿಂದ 7ರ ತನಕ ಜಿಲ್ಲಾಮಟ್ಟದ ಓಣಂ ಆಚರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಂಘಟನಾ ಸಮಿತಿ ರಚನೆ ಸಭೆ ನಡೆಯಿತು.

ಶಾಸಕ ಎಂ.ರಾಜಗೋಪಾಲನ್ ಸಭೆ ಉದ್ಘಾಟಿಸಿದರು. ಸಮಿತಿ ಸಂಚಾಲಕರಾಗಿ ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಸಿ.ಎಚ್. ಕುಂಞಂಬು, ಎನ್.ಎ. ನೆಲ್ಲಿಕುನ್ನು, ಎ.ಕೆ.ಎಂ. ಅಶ್ರಫ್, ಇ. ಚಂದ್ರಶೇಖರನ್, ಅಧಿಕಾರಿಗಳಾದ ಎ. ನಸೀಬ್ ಮತ್ತು ಜೆ.ಕೆ. ಜಿನೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಶಾಸಕ ರಾಜಗೋಪಾಲನ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಬೇಬಿ ಬಾಲಕೃಷ್ಣನ್, ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮೀ, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ, ಚೆರುವತ್ತೂರು ಪಂಚಾಯಿತಿ ಅಧ್ಯಕ್ಷ ಸಿ.ವಿ. ಪ್ರಮೀಳಾ ಆಯ್ಕೆಯಾಗಿದ್ದಾರೆ. ಜತೆಗೆ ವಿವಿಧ ಸಮಿತಿಗಳನ್ನೂ ರಚಿಸಲಾಯಿತು.

ಚೆರುವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ವಿ. ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ವಲಿಯಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ. ಸಜೀವನ್, ಸಹಾಯಕ ಜಿಲ್ಲಾಧಿಕಾರಿ ಲಿಪು ಎಸ್.ಲಾರೆನ್ಸ್, ಅಧಿಕಾರಿಗಳಾದ ಎಂ.ಮಧುಸೂಧನನ್, ಜಿ. ಸುರೇಶ್ ಬಾಬು ಉಪಸ್ಥಿತರಿದ್ದರು. ಜೆ.ಕೆ. ಜಿಜೇಶ್ ಕುಮಾರ್ ಸ್ವಾಗತಿಸಿದರು. ಅಂಜು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net