

ಕಲಬುರಗಿ -ಶ್ರಾವಣ ಮಾಸದ ನಿಮಿತ್ತ ನಗರದ ಗಂಗಾನಗರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿಯಿಂದ 26ರಿಂದ ಶ್ರೀ ಶರಣಬಸವೇಶ್ವರರ ಮಹಾ ಪುರಾಣ ಆರಂಭವಾಗಲಿದೆ..
ನಿತ್ಯ ಸಂಜೆ ನಡೆಯಲಿರುವ ಪುರಾಣವನ್ನು ಆ.26ರಂದು ಸಂಜೆ 7ಕ್ಕೆ ಶ್ರೀ ಶರಣಬಸವೇಶ್ವರ 9 ನೇ ಪೀಠಾಧಿಪತಿ ಚಿ.ದೊಡಪ್ಪ ಅಪ್ಪ ಉದ್ಘಾಟಿಸಲಿದ್ದಾರೆ.ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ ದಾಕ್ಷಾಯಿಣಿ ಎಸ್.ಅಪ್ಪ ಸಾನ್ನಿಧ್ಯ ವಹಿಸಿವರು.ಪುಣ್ಯಕೋಟೆ ಆಶ್ರಮದ ಶ್ರೀ ಡಾ.ವರಲಿಂಗೇಶ್ವರರು ಉಪಸ್ಥಿತಿ ಹಾಗು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅಧ್ಯಕ್ಷತೆ ವಹಿಸುವರು..
ವಿಶೇಷ ಸನ್ಮಾನ ಮಾಡಲಾಗುವುದು.ಗದಗ ಶ್ರೀ ವಿರೇಶ್ವರ ಪುಣ್ಯಾಶ್ರಮದ ಪಂ ವೀರೇಶ ಶಾಸ್ತ್ರಿ ಮಲಕೂಡ ಪುರಾಣ ಪ್ರವಚನ ಮಾಡಲಿದ್ದಾರೆ.ಸಂಗೀತ ವಿನೋದ ದಸ್ತಾಪುರ ,ಅಭಿಲಾಶ ಮಠಪತಿ ತಬಲಾ ಸಾಥ್ ನೀಡಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಸಂತೋಷ.ಎಚ್.ಹುಳಗೇರಿ ,ಕಾರ್ಯದರ್ಶಿ ಶಿವಾನಂದ ನಂದಳ್ಳಿ ತಿಳಿಸಿದ್ದಾರೆ