

ಕೊಕ್ಕರ್ಣೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡಂಬೆಟ್ಟುವಿನ ಗದ್ದೆಗಳಿಗೆ ಮಂಗಳವಾರ ರಾತ್ರಿ ಕಾಡುಕೋಣಗಳ ಹಿಂಡು ದಾಳಿ ಮಾಡಿದ್ದು, 20 ಎಕರೆಗೂ ಅಧಿಕ ಗದ್ದೆಗಳಲ್ಲಿ ಮಾಡಿದ್ದ ಭತ್ತದ ನಾಟಿ ನಾಶಗೊಳಿಸಿವೆ. ವಡ್ಡಂಬೆಟ್ಟು ರೈತರಾದ ಅಕ್ಕಯ್ಯ ರಾಮ ಪೂಜಾರಿ, ಅಮ್ಮಣ್ಣಿ ಅಪ್ಪು ಪೂಜಾರಿ, ನರಸಿಂಹ ಗೌರಿ ಪೂಜಾರಿ, ಬಾಬು ಪಾರ್ವತಿ ಪೂಜಾರಿ, ಸಾಧು ರಾಮ ಪೂಜಾರಿ, ಅಮ್ಮಣ್ಣಿ ಅಣ್ಣಪ್ಪ ಪೂಜಾರಿ, ರತ್ನಾಕರ ಸುಕನ್ಯಾ ಪೂಜಾರಿ, ಶೇಖರ ಲೀಲಾವತಿ ಪೂಜಾರಿ, ಗೋಪಾಲ ಪದ್ದು ಪೂಜಾರಿ ಗದ್ದೆಗಳಲ್ಲಿ ಬೆಳೆಯಲಾಗಿದ್ದ ಭತ್ತವನ್ನು ಕಾಡುಕೋಣಗಳು ಸಂಪೂರ್ಣ ನಾಶಗೊಳಿಸಿವೆ.