ಕಡವೆ ಶಿಕಾರಿ: ನಾಲ್ವರನ್ನು ಬಂಧಿಸಿದ ಅರಣ್ಯ ಇಲಾಖೆ

ವಿಜಯವಾಣಿ (77)
Published on

ಶಿವಮೊಗ್ಗ: ವನ್ಯಜೀವಿ ವಿಭಾಗದ ಉಂಬಳೇಬೈಲ್ ವಲಯ ವ್ಯಾಪ್ತಿಯಲ್ಲಿ ಕಡವೆ ಶಿಕಾರಿ ಮಾಡಿದ್ದ ನಾಲ್ವರನ್ನು ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಭದ್ರಾವತಿ ತಾಲೂಕಿನ ಗೊಂದಿ ಗ್ರಾಮದ ಶಿವ (28), ವೆಂಕಟೇಶ್ (60), ಚಿಕ್ಕಮಗಳೂರು ಜಿಲ್ಲೆ ಎನ್‌ಆರ್ ಪುರ ತಾಲೂಕಿನ ಚೌಡಿಕಟ್ಟೆ ಭೈರಾಪುರದ ಮಂಜಪ್ಪ (45) ಹಾಗೂ ವಿನೋದ್(19) ಬಂಧಿತರು.

ಶನಿವಾರ (ಆ.31) ಉಂಬಳೇಬೈಲ್ ವ್ಯಾಪ್ತಿಯಲ್ಲಿ ಕಡವೆ ಶಿಕಾರಿ ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವನ್ಯಜೀವಿ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ನಾಲ್ವರನ್ನು ಬಂಧಿಸಿದ್ದಾರೆ. ಭದ್ರಾವತಿಯ ಡಿಸಿಎಫ್ ಆಶೀಶ್ ರೆಡ್ಡಿ, ಚನ್ನಗಿರಿ ವಿಭಾಗದ ಎಸಿಎಫ್ ರತ್ನಪ್ರಭಾ ಅವರ ಮಾರ್ಗದರ್ಶನದಲ್ಲಿ ಉಂಬ್ಳೆಬೈಲ್ ಆರ್‌ಎಫ್‌ಒ ಗಿಡ್ಡಸ್ವಾಮಿ, ಡಿವೈಆರ್‌ಎಫ್ ಪವನ್, ಬಿ.ಎಫ್.ಸಂಜು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬಂಧಿತರಿಂದ ಕಡವೆ ಮಾಂಸ, ಅಡುಗೆಗೆ ಸಿದ್ಧಪಡಿಸಿಕೊಂಡಿದ್ದ ಸಾಮಾಗ್ರಿಗಳು ಹಾಗೂ ಒಂದು ಬೈಕ್ ಅನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳನ್ನು ಅರಣ್ಯಾಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net