ಮಾನವ, ಪ್ರಾಣಿ ಸಂಕುಲಕ್ಕೆ ಭಗವಂತ ನೀಡಿದ ಕೊಡುಗೆ ಅರಣ್ಯ

24HNL2- MLA MANE
Published on

ಹಾನಗಲ್ಲ: ಮಾನವ ಮತ್ತು ಪ್ರಾಣಿ ಸಂಕುಲಕ್ಕೆ ಅರಣ್ಯ ಸಂಪತ್ತು ಭಗವಂತ ನೀಡಿದ ಅದ್ಭುತ ಕೊಡುಗೆ. ಅರಣ್ಯ ನಾಶದಿಂದಾಗಿ ಸಕಾಲಕ್ಕೆ ಮಳೆ ಆಗುತ್ತಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ದ್ಯಾಮನಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೀರು ಅತ್ಯಮೂಲ್ಯವಾದ ನೈಸರ್ಗಿಕ ಸಂಪತ್ತು. ಇಂಥ ಸಂಪತ್ತು ಕಣ್ಣೆದುರಿಗೆ ಹರಿದು ವ್ಯರ್ಥವಾಗುತ್ತಿದ್ದರೂ ಕಣ್ಮುಚ್ಚಿಕೊಂಡು ಹೋಗುವ ನಮ್ಮ ಮನೋಭಾವ ಬದಲಾಗಬೇಕಿದೆ. ನೀರಿನ ಅಪವ್ಯಯ ತಡೆಗಟ್ಟುವಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದರು.

ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ರೇಣುಕಾ ಸುಡಂಬಿ, ಉಪಾಧ್ಯಕ್ಷ ನಿಂಗಪ್ಪ ಬಂಗೇರ, ಸದಸ್ಯ ಭರಮಗೌಡ ಚನ್ನಗೌಡ್ರ, ಮುಖ್ಯೋಪಾಧ್ಯಾಯ ಎಸ್.ಎಫ್. ಕಠಾರಿ, ಸಹಶಿಕ್ಷಕ ಎಸ್.ಎನ್. ಶಿವಣ್ಣನವರ, ಪಿಡಿಒ ಬಾಯಕ್ಕ ಕೋಳಿ, ಎಸ್​ಡಿಎಂಸಿ ಅಧ್ಯಕ್ಷ ಬಸವರಾಜ ಗುರಣ್ಣನವರ, ಸದಸ್ಯರಾದ ಕೋಟೆಪ್ಪ ನೆಗಳೂರ, ಶಿವಪ್ಪ ಕುರಡಿ, ವಿರೂಪಾಕ್ಷಗೌಡ ಚನ್ನಗೌಡ್ರ, ಜಗದೀಶ ಕುರಡಿ, ಭಾರತಿ ಕುರಡಿ, ಲಕ್ಷ್ಮೀ ಕುರಡಿ, ರೇಖಾ ಗುರಣ್ಣನವರ, ಅಕ್ಕಮ್ಮ ತಳವಾರ, ಮಂಜಕ್ಕ ನೆಗಳೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net