

ಬೈಲಕುಪ್ಪೆ: ಇಲ್ಲಿನ ಬಿ.ಎಂ.ರಸ್ತೆ ಪಕ್ಕದಲ್ಲಿರುವ ಗುಳ್ಳೆದ, ಹಳ್ಳ ಅರಣ್ಯಕ್ಕೆ ಶುಕ್ರವಾರ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ತೇಗದ ತೋಟ ಸೇರಿ ಅರಣ್ಯ ಪ್ರದೇಶದ ಕೆಲಭಾಗ ನಾಶವಾಗಿದೆ.
ಬೆಂಕಿ ಅವಘಡ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ವಲಯ ಅರಣ್ಯಾಧಿಕಾರಿ ಪದ್ಮಶ್ರೀ ಕುಶಾಲನಗರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಪ್ಪ ಉಪವಲಯ ಅರಣ್ಯ ಅಧಿಕಾರಿ ಮಧುಸೂದನ್, ಸಿಬ್ಬಂದಿ ಹೊನ್ನಪ್ಪ, ಮನೋಹರ, ಸ್ಥಳೀಯರು ಇದ್ದರು.