ಖರೀದಿಸಿದ ರಾಗಿಗೆ ಹಣ ನೀಡಲು ಒತ್ತಾಯ

HNP 30 PROTEST 2
Published on

 ಹೊಳೆನರಸೀಪುರ: ತಾಲೂಕಿನ ಅರುನೂರು ಗ್ರಾಮದ ರೈತರಿಂದ ಖರೀದಿಸಿದ ರಾಗಿಗೆ ಹಣ ಸಂದಾಯ ಮಾಡಿಲ್ಲ ಎಂದು ಆರೋಪಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಅಧ್ಯಕ್ಷ ದಯಾನಂದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ನೂರಾರು ರೈತರಿಂದ ಹಳ್ಳಿ ಮೈಸೂರು ರಾಗಿ ಕೇಂದ್ರ ಖರೀದಿಸಿದೆ. ರೈತರಿಗೆ ಬರಬೇಕಿದ್ದ 2.57 ಕೋಟಿ ರೂ. ಈವರೆಗೂ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನಾಡಕಚೇರಿಗೆ ತೆರಳಿದ ಪ್ರತಿಭಟನಾಕಾರರು ಉಪ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಿ ಕೂಡಲೇ ಖರೀದಿಸಿದ ರಾಗಿಗೆ ಹಣ ನೀಡುವಂತೆ ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ಶಿವಕುಮಾರ್,15 ದಿನಗಳಲ್ಲಿ ಸರ್ಕಾರದಿಂದ ಹಣ ಕೊಡಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net