ಮೈಸೂರು ಭಾಗಕ್ಕೂ ವಿಶೇಷ ಸ್ಥಾನಮಾನ ನೀಡಲು ಪಟ್ಟು

web
Published on

ಕೋಲಾರ: ಹೈದರಾಬಾದ್ ಕರ್ನಾಟಕಕ್ಕೆ ನೇಮಕಾತಿಯಲ್ಲಿ ನೀಡಿರುವ ವಿಶೇಷ ಸ್ಥಾನಮಾನವನ್ನು, ಮೈಸೂರು ಭಾಗದ ವಿದ್ಯಾವಂತರಿಗೂ ಕಲ್ಪಿಸಬೇಕು ಎಂದು ಜೂ.1ರಂದು ಬೆಂಗಳೂರು ಸ್ವಾತಂತ್ರ ಉದ್ಯಾನವನದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮುಳಬಾಗಿಲು ತಾಲೂಕು ನಾಗರೀಕ ವೇದಿಕೆ ಅಧ್ಯಕ್ಷ ರೋಹನ್ ಗೌಡ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು, ಬೆಂಗಳೂರು, ದಕ್ಷಿಣ ಕರ್ನಾಟಕ, ಮದ್ಯ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದ ಸುವಾರು 24 ಜಿಲ್ಲೆಗಳ ಜನರಿಗೆ ಶಿಕ್ಷಣ, ನೇಮಕಾತಿ ಹಾಗೂ ಬಡ್ತಿಯಲ್ಲಿ ಅನ್ಯಾಯ ಆಗುತ್ತಿದ್ದು ಈ ಬಗ್ಗೆ ಸರ್ಕಾರದ ಗಮನಸೆಳೆಯಲು ಪ್ರಯತ್ನ ನಡೆಯಲಾಗುತ್ತಿದೆ ಎಂದರು.

ಸರ್ಕಾರದ ನಿಯವಾವಳಿಗಳನ್ನು ರೂಪಿಸುವಾಗ ಸಂವಿಧಾನಾತ್ಮಕವಾಗಿ ಮತ್ತು ಇತರರ ಹಕ್ಕುಗಳಿಗೆ ತೊಂದರೆಯಾಗದಂತೆ ರೂಪಿಸಬೇಕಾಗುತ್ತದೆ. ಆದರೆ ಹೈದರಾಬಾದ್ ಕರ್ನಾಟಕ ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ನಿಯಮ ರೂಪಿಸುವಾಗ ಹಾಗೂ ಅನುಷ್ಠಾನಗೊಳಿಸುವಾಗ ಸಂವಿಧಾನ 98ನೇ ತಿದ್ದುಪಡಿ ವಿರುದ್ಧವಾಗಿ ರೂಪಿಸಲಾಗಿದೆ ಮತ್ತು ಅನುಷ್ಠಾನಗೊಳಿಸುತ್ತಿರುವುದರಿಂದ ಮೈಸೂರು ಭಾಗದ ವಿದ್ಯಾವಂತರಿಗೆ ಅನ್ಯಾಯ ಆಗುತ್ತಿದೆ ಎಂದು ದೂರಿದರು.

ಈ ಅನ್ಯಾಯ ಉದ್ಯೋಗ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿದಿದ್ದು,ಈ ನೇರ ಅನ್ಯಾಯ ತಪ್ಪಿಸಲು ವಾತಾಡದ ಹಾಗೂ ಅರಿವಿಲ್ಲದ ಜನಪ್ರತಿನಿಧಿಗಳ ಮನೆಗಳ ಮುಂದೆ ಸಹ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಹಸಿರು ಪ್ರತಿಷ್ಠಾನ ಅಧ್ಯಕ್ಷ ಕೆ.ಜಿ.ಕುಮಾರ್, ಸಂಚಾಲಕ ಗೋವಿಂದರಾಜ್ ಪಟೇಲ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net