

ಆರ್.ಬಿ.ಅಣ್ಣಿಗೇರಿ ತಲ್ಲೂರ
ಗ್ರಾಮದಿಂದ ಯರಗಟ್ಟಿ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕ ಹಾದು ಹೋಗಿರುವ ನಿರಂತರ ಜ್ಯೋತಿ ವಿದ್ಯುತ್ ಕಂಬಗಳು ಬಾಗಿ ನಿಂತಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಜನರು ಆತಂಕದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಿಸಿವೆ.
ವಿದ್ಯುತ್ ಕಂಬ ಕಷಿಭೂಮಿಯಲ್ಲಿ ಬೀಳುವ ಸ್ಥಿತಿಯಲ್ಲಿದ್ದು, ಭಯದಿಂದ ರಾತ್ರಿ ವೇಳೆ ಜಮೀನಿಗೆ ನೀರು ಹರಿಸಲು ರೆತರು ಹಿಂದೇಟು ಹಾಕುವಂತಾಗಿದೆ.
ಈ ಮಾರ್ಗದ ಮೂಲಕ ಅನೇಕರು ಉದ್ಯೋಗ, ಶಿಣ ಮತ್ತಿತರ ಕೆಲಸಗಳಿಗೆ ತೆರಳುತ್ತಾರೆ.
ಜೋರಾಗಿ ಮಳೆ ಗಾಳಿ ಬಂದ್ರೆ ಆಪಾಯ ಹೆಚ್ಚಾಗುವ ಸಾಧ್ಯತೆ ಹೆಚ್ಚು. ರಸ್ತೆಯಲ್ಲಿ ಸಂಚರಿಸುವ ವಾಹನಗಳು ಮತ್ತು ಜನರಿಗೆ ಜೀವನಷ್ಟವಾಗುವ ಪರಿಸ್ಥಿತಿ ಎದುರಾಗಿದೆ. ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ರಸ್ತೆ ಚಿಕ್ಕದಾಗಿದೆ.
ಸುಗಮ ಸಂಚಾರಕ್ಕೆ ರಸ್ತೆ ಅಗಲೀಕರಣ ಮಾಡಲು ಅಧಿಕಾರಿಗಳು ಕ್ರಮ ಕೆಗೊಳ್ಳಬೇಕು ಎಂದು ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.
> ಕಂಬದ ಪಕ್ಕದಲ್ಲಿ ಪ್ರತಿದಿನ ನೂರಾರು ಜನರು, ವಾಹನಗಳು ಸಂಚರಿಸುತ್ತಿವೆ. ಹೋಗುವಾಗ ಬಿದ್ದು ಬಿಡಬಹುದೆಂಬ ಭಯ ಉಂಟಾಗಿದೆ. ಹೆಸ್ಕಾ ಅಧಿಕಾರಿಗಳು ಆದಷ್ಟು ಬೇಗ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಆಲದಕಟ್ಟಿ ಕೆಎಂ ಗ್ರಾಪಂ ಸದಸ್ಯ ಅಶೋಕ ಚಿಕ್ಕೋಪ್ಪ
> ಕಂಬ ವಾಲಿರುವ ವಿಷಯ ನಮ್ಮ ಗಮನಕ್ಕೆ ಬಂದಿದ್ದು, ಆದಷ್ಟು ಬೇಗ ಸರಿಪಡಿಸಲಾಗುವುದು.
ಮಹಾಂತೇಶ ಯರಗಟ್ಟಿ ್ರಭಾರಿ ಸಹಾಯಕ ಅಭಿಯಂತ ಹೆಸ್ಕಾಂ ಯರಗಟ್ಟಿ