

ಸಾವಯುವ, ಆಧುನಿಕ ಬೇಸಾಯದಿಂದ ಪ್ರಗತಿಕಂಡ ರೈತ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಕೃಷಿಯನ್ನು ಕಸುಬಾಗಿಸಿಕೊಂಡವರು, ಆದಾಯಕ್ಕಾಗಿ ಅವಲಂಬಿಸಿದವರ ಮಧ್ಯೆ ಮನಸ್ಸಿನ ನೆಮ್ಮದಿ, ಸಂತಸಕ್ಕಾಗಿ ಆಸಕ್ತಿಯಿಂದ ವ್ಯವಸಾಯದಲ್ಲಿ ತೊಡಗಿಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ. ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದ ಪ್ರಗತಿಪರ ರೈತ ಗುತ್ತಲೇಗೌಡ.
ಐದೂವರೆ ಎಕರೆ ಸ್ವಂತ ಜಮೀನು ಹಾಗೂ 8 ಎಕರೆ ಗುತ್ತಿಗೆ ಜಮೀನು ಹೊಂದಿರುವ ಗುತ್ತಲೇಗೌಡ ಅವರು ಆಧುನಿಕ ಕೃಷಿ ಪದ್ಧತಿ ಮೂಲಕ ತೆಂಗು, ಮಾವಿನ ತೋಟ ನಿರ್ವಹಿಸುತ್ತಿದ್ದಾರೆ. ಮಿಶ್ರ ಬೇಸಾಯ ಅನುಸರಿಸಿ, ಖಾಲಿ ಜಾಗದಲ್ಲಿ ರೇಷ್ಮೆ ಕೃಷಿ, ಟೊಮ್ಯಾಟೊ, ಸೌತೆ, ಬದನೆ ಸೇರಿ ವಿವಿ‘ ತರಕಾರಿ ಬೆಳೆದು, ಲಾಭ ಪಡೆಯುತ್ತಿದ್ದಾರೆ. ಇದಲ್ಲದೇ 5 ಎಕರೆಯಲ್ಲಿ ಪಪ್ಪಾಯ ಮತ್ತು ಮಳೆಯಾಶ್ರಿತ ರಾಗಿಯನ್ನೂ ಬೆಳೆದಿರುವ ಗುತ್ತಲೇಗೌಡ ಅವರು ಕೃಷಿಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ, ಮುಂದೆಯೂ ಅದರಲ್ಲೇ ಯಶಸ್ಸು ಕಾಣಬೇಕೆಂಬ ಮಹದಾಶಯ ಹೊಂದಿದ್ದಾರೆ.
ಕೃಷಿ ಮಾತ್ರವಲ್ಲದೇ ವಾವು ವ್ಯಾಪಾರದಲ್ಲೂ ತೊಡಗಿಸಿಕೊಂಡಿರುವ ಅವರು, ವಾವಿನ ಸೀಜನ್‌ನಲ್ಲಿ ಮಾವಿನ ತೋಟಗಳನ್ನು ರೈತರಿಂದ ಗುತ್ತಿಗೆ ಪಡೆದು, ದೊಡ್ಡಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆಸುವ ಮೂಲಕ ಮಾವು ವ್ಯಾಪಾರದಲ್ಲೂ, ಲಾಭ ಗಳಿಸುತ್ತಿದ್ದಾರೆ.
ಗುತ್ತಲೇಗೌಡ ಅವರು ತರಕಾರಿ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಕೇವಲ ಕೊಟ್ಟಿಗೆ ಗೊಬ್ಬರ ಮಾತ್ರ ಬಳಸುವ ಮೂಲಕ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಸಾವಯವ ಕೃಷಿಯಿಂದಲೇ ಪ್ರಗತಿ ಸಾಧಿಸಿ ಆಧುನಿಕ ರೈತರಿಗೂ ಮಾದರಿಯಾಗಿದ್ದಾರೆ.
ನೀರಾವರಿಗಾಗಿ ಒಂದು ಬೋರ್‌ವೆಲ್ ಕೊರೆಸಿಕೊಂಡಿದ್ದು, ಒಂದು ನೆಲ ಬಾವಿಯೂ ಇದೆ. ನೀರಿನ ಕೊರತೆ ಇಲ್ಲದಿದ್ದರೂ ಸಹ ನೀರಿನ ಮಿತ ಬಳಕೆಗೆ ಒತ್ತು ಕೊಟ್ಟು ಪಪ್ಪಾಯ, ರೇಷ್ಮೆ ಹಾಗೂ ಟೊಮ್ಯಾಟೊ, ಮತ್ತಿತರ ತರಕಾರಿ ಕೃಷಿಗೆ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ.
ವಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವ ಸಮಯ ನೋಡಿಕೊಂಡು ತರಕಾರಿ ಬೆಳೆಯುವ ಮೂಲಕ ತರಕಾರಿ ಬೆಳೆಗಳಲ್ಲೇ ಗುತ್ತಲೇಗೌಡ ಅವರು ಲಾಭ ಕಂಡುಕೊಂಡಿದ್ದು, ಮೊದಲ ಹಂತದಲ್ಲಿ ಪಪ್ಪಾಯ, ಟೊಮ್ಯಾಟೊ ಬೆಳೆದರೆ ಮತ್ತೆ ಅದೇ ಜಾಗದಲ್ಲಿ ತರಕಾರಿ ಬೆಳೆಯದೆ ಬೇರೆ ಬೆಳೆ ಬೆಳೆಯುವ ಮೂಲಕ ನಾಟಿಯಲ್ಲಿ ಬದಲಾವಣೆ ಮಾಡಿ ಭೂಮಿಯ ಫಲವತ್ತತೆಯನ್ನೂ ಕಾಯ್ದುಕೊಳ್ಳುತ್ತಾರೆ.
ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡುಕೊಂಡಿರುವ ಗುತ್ತಲೇಗೌಡ ಉಪಕಸುಬಾಗಿ ಆಯ್ದುಕೊಂಡಿದ್ದು ಹೈನುಗಾರಿಕೆಯನ್ನು. 10ಕ್ಕೂ ಹೆಚ್ಚು ಹಳ್ಳಿಕಾರ್ ನಾಟಿ ಹಸುಗಳು, ನಾಟಿ ಕೋಳಿಗಳು, ಮೇಕೆ ಮತ್ತು ಕುರಿ ಸಾಕಣೆ, ವಿಶೇಷವಾಗಿ ಎಚ್.ಎಫ್. ತಳಿಯ 7 ಹಸುಗಳನ್ನು ಸಾಕಿ, ಪ್ರತಿದಿನ ಸುಮಾರು 45 ಲೀಟರ್ ಹಾಲು ಸರಬರಾಜು ವಾಡುತ್ತಿದ್ದಾರೆ.