ಸ್ಪರ್ಧಾಳುಗಳಿಗೆ ಬೆಂಬಲಿಗರ ಸಾಥ್

krpp namination
ಕನಕಗಿರಿಯಲ್ಲಿ ಚುನಾವಣಾಧಿಕಾರಿ ಸಮೀರ್ ಮುಲ್ಲಾಗೆ ಕೆಆರ್‌ಪಿಪಿ ಅಭ್ಯರ್ಥಿ ಡಾ.ಚಾರುಲ್ ವೆಂಕಟರಮಣ ದಾಸರಿ ನಾಮಪತ್ರ ಸಲ್ಲಿಸಿದರು. ಪ್ರಮುಖರಾದ ತಿಮ್ಮಾರೆಡ್ಡಿ ಗಿಲ್ಲೆಸುಗೂರು, ವಿರೂಪಾಕ್ಷಿಗೌಡ ಹೇರೂರು ಇತರರಿದ್ದರು.
Published on

ಕನಕಗಿರಿ: ವಿಧಾನಸಭೆ ಚುನಾವಣೆಗೆ ಮೀಸಲು ಕ್ಷೇತ್ರ ಕನಕಗಿರಿಯಿಂದ ಕೊನೆಯ ದಿನ ಗುರುವಾರ ಅಮಾವಾಸ್ಯೆ ಇದ್ದರೂ ಅಭ್ಯರ್ಥಿಗಳು ಪೈಪೋಟಿಯಿಂದ ಉಮೇದುವಾರಿಕೆ ಸಲ್ಲಿಸಿದರು.

ಬಿಜೆಪಿ ತೊರೆದ ರಾಜಗೋಪಾಲ


ಬಿಜೆಪಿ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಪಕ್ಷ ತೊರೆದ ರಾಜಗೋಪಾಲ ಜೆಡಿಎಸ್‌ನಿಂದ ಉಮೇದುವಾರಿಕೆ ಸಲ್ಲಿಸಿದರೆ, ಇನ್ನೊಬ್ಬ ಮುಖಂಡ ಧರ್ಮಣ್ಣ ಪಕ್ಷೇತರರಾಗಿ ಕಣಕ್ಕಿಳಿಯಲು ಬಯಸಿ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಅಲ್ಲದೇ, ಪತ್ನಿಗೆ ಕಮಲ ಟಿಕೆಟ್ ಸಿಗದ ಕಾರಣ ಕೆಆರ್‌ಪಿಪಿ ಸೇರಿದ್ದ ತಿಮ್ಮಾರೆಡ್ಡಿ ಗಿಲ್ಲೆಸುಗೂರು, ರೆಡ್ಡಿ ಪಕ್ಷದ ಹುರಿಯಾಳು ಡಾ.ಚಾರುಲ್ ವೆಂಕಟರಮಣ ದಾಸರಿಗೆ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ ಹಾಗೂ ಕೆಆರ್‌ಪಿಪಿ ಹುರಿಯಾಳುಗಳು ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದರು.


ಬಿಎಸ್‌ಪಿಯಿಂದ ಬೇನಾಳಪ್ಪ, ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದ ರಮೇಶ ಕೋಟೆ, ಆರ್‌ಪಿಐ(ಎ)ನ ಉಷಾ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಹುಲಿಯಪ್ಪ, ಕಲ್ಯಾಣಂ ನಾಗರಾಜ, ನಿವೃತ್ತ ತಹಸೀಲ್ದಾರ್ ಕೆ.ಬಾಲಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಏ.24 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದು, ಯಾರು ಕಣದಲ್ಲಿ ಉಳಿಯುವರು, ಯಾರು ಹಿಂದೆ ಸರಿಯುವರೋ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net