

ಮಮದಾಪುರ:ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಜತೆಗೆ ಅವರ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ಅವರಿಗೆ ಒಳ್ಳೆಯ ಸಂಸ್ಕಾರ ನೀಡಿ ಬದುಕು ರೂಪಿಸಲು ನೆರವಾಗಬೇಕು ಎಂದು ಚಿಂತಾಮಣಿ ಪಾವಟೆ ಪ್ರೌಢಶಾಲೆ ನಿವತ್ತ ಮುಖ್ಯಶಿಕ ಅಶೋಕ ತೋಟಗಿ ಹೇಳಿದರು.
ಸ್ಥಳಿಯ ಚರಮೂರ್ತೀಶ್ವರ ಮಹಿಳಾ ಶಿಣ ಸಂಸ್ಥೆಯ ಬಿಬಿ ಮಮದಾಪುರ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ಕಾನ್ವೆಂಟ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 25ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೆಯ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಶಿಣ ಇಲಾಖೆ ನಿವತ್ತ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಮಾತನಾಡಿ, ಪಾಲಕರು ಮೊಬೆಲ್ ಬಳಕೆ ತಗ್ಗಿಸಿ ಮಕ್ಕಳ ಮುಂದೆ ಪುಸ್ತಕ ಅಥವಾ ದಿನಪತ್ರಿಕೆ ಓದುವುದರಿಂದ ಅವರಲ್ಲಿ ಓದುವ ಹವ್ಯಾಸ ಬೆಳೆಯುತ್ತದೆ ಎಂದು ಹೇಳಿದರು.
ಮುಖಂಡ ಡಾ. ಮಹಾಂತೇಶ ಕಡಾಡಿ ಮಾತನಾಡಿ, ವಿದ್ಯಾರ್ಥಿಗಳು ಶಿಕರ ಮಾರ್ಗದರ್ಶನದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಹಳೆಯ ವಿದ್ಯಾರ್ಥಿನಿಯಾದ ನಿಲೋರ್ ಮುಲ್ಲಾ ಪಿಎಸ್ಐಯಾಗಿ ಹಾಗೂ 5ನೇ ತರಗತಿ ವಿದ್ಯಾರ್ಥಿ ವಿನಿತ್ ಪಟಗುಂದಿ ಸ್ಪರ್ಧಾ ಪರೀೆಗಳಲ್ಲಿ 65 ಸಾವಿರ ರೂಪಾಯಿಕ್ಕೂ ಬಹುಮಾನ ಪಡೆದಿದ್ದಕ್ಕೆ ಸನ್ಮಾನಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸತಿಕ ಕಾರ್ಯಕ್ರಮ ಜರುಗಿದವು. ಪ್ರಸಕ್ತ ಸಾಲಿನ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸ್ಥಳಿಯ ಚರಮೂರ್ತೀಶ್ವರ ಸ್ವಾಮೀಜಿ ಸಾನ್ನಿಧ್ಯ, ಐ.ಸಿ. ಕೊಣ್ಣೂರ ಅಧ್ಯತೆ ವಹಿಸಿದ್ದರು. ಸ್ನೇಹಾ ಕೊಣ್ಣೂರ, ರೇಖಾ ಮುರಗೋಡ, ಬಾಳಪ್ಪ ಪಾಟೀಲ, ಆನಂದ ಕೊಣ್ಣೂರ ಹಾಗೂ ಶಿಕರಾದ ಎಂ.ವಿ. ಪತ್ತಾರ, ಡಿ.ಎಂ. ಸುಣಧೋಳಿ, ಎ.ಎಸ್. ಕೊಣ್ಣೂರ, ಪಿ.ಎನ್. ಮಡಿವಾಳರ, ಎನ್.ಎಸ್. ಅರಳಿಮಟ್ಟಿ ಮತ್ತು ಪಾಲಕರಿದ್ದರು.