

ಬೈಲಹೊಂಗಲ: ವಿದ್ಯಾರ್ಥಿ ದಿಸೆಯಲ್ಲೇ ಉನ್ನತ ಗುರಿ ಹಾಗೂ ಕನಸು ಹೊಂದಿದಾಗ ಮಾತ್ರ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಶಿಕ ಮಹಾಂತೇಶ ಪಾಟೀಲ ಹೇಳಿದರು. ಪಟ್ಟಣದ ಕೆಎಲ್ಇ ಸಂಸ್ಥೆಯ ವಿಜ್ಞಾನ ಮತ್ತು ವಾಣಿಜ್ಯ ಪಿಯು ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಕ್ರೀಡಾ ಮತ್ತು ಸಾಂಸತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕೆಎಲ್ಇ ಸಂಸ್ಥೆ ಉಪಾಧ್ಯ ಬಿ.ಎಸ್.ತಟವಟಿ ಮಾತನಾಡಿ, ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಶಿಣ ಸಹಕಾರಿ. ವಿದ್ಯಾರ್ಥಿಗಳು ಹೆತ್ತವರು ಹಾಗೂ ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದರು. ಶಿಕ ಎನ್.ಆರ್.ಠಕ್ಕಾಯಿ ಮಾತನಾಡಿದರು. ಪ್ರಾಚಾರ್ಯರಾದ ಎಸ್.ಬಿ.ತಟವಾಟಿ, ಎಸ್.ಬಿ.ನಿರಡಿ, ವಿ.ಎಸ್.ಪಾಟೀಲ, ಕ್ರೀಡಾ ವಿಭಾಗದ ಮುಖ್ಯಸ್ಥ ಎಸ್.ಐ.ಕುಳ್ಳೊಳ್ಳಿ, ಪ್ರೊ.ಸಿ.ಆರ್.ಸಣ್ಣಾನಾಯ್ಕರ, ಸಾಂಸತಿಕ ವಿಭಾಗದ ಮುಖ್ಯಸ್ಥ ವಿ.ಬಿ.ಬಡಿಗೇರ, ಪ್ರೊ.ದೀಪ್ತಿ ಪಾಟೀಲ, ವಿದ್ಯಾ ಮುನವಳ್ಳಿ ಇತರರಿದ್ದರು.