

ಕಾಸರಗೋಡು: ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ, ಕೇಂದ್ರ ಸರ್ಕಾರದ ‘ನಶಾ ಮುಕ್ತ್ ಭಾರತ್’ ಯೋಜನೆ, ಜಿಲ್ಲಾ ಪೊಲೀಸ್ ಅಧೀನದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ವತಿಯಿಂದ ಸೀನಿಯರ್ ಮತ್ತು ಸೂಪರ್ ಸೀನಿಯರ್ ಮಿಶ್ರ ಸೆವೆನ್ಸ್ ಫುಟ್‌ಬಾಲ್ ಪಂದ್ಯಾವಳಿ ಜರುಗಿತು.
ಕಾಸರಗೋಡು ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಕಾಸರಗೋಡು ಕೇಂದ್ರೀಯ ವಿದ್ಯಾಲಯ ಆವರಣದಿಂದ ನಡೆದ ವಿದ್ಯಾರ್ಥಿ ಪೊಲೀಸ್ ಕೆಡೆಟ್‌ಗಳ ಪಥಸಂಚಲಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ವಿಜಯಭರತ್ ರೆಡ್ಡಿ ಐಪಿಎಸ್ ಚಾಲನೆ ನೀಡಿದರು. ಹೆಚ್ಚುವರಿ ಎಸ್ಪಿ ಸಿ.ಎಂ.ದೇವದಾಸನ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಪಿಸಿ ಯೋಜನಾ ಕೋರ್ ಸಮಿತಿ ಸಂಚಾಲಕ ಟಿ.ತಂಬನ್ ಎಸ್‌ಐ ಮತ್ತು ಸಿ.ಗೋಪಾಲಕೃಷ್ಣನ್ ಉಪಸ್ಥಿತರಿದ್ದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್ ಸ್ವಾಗತಿಸಿದರು. ಕಾಸರಗೋಡು ಶೈಕ್ಷಣಿಕ ಜಿಲ್ಲೆಯ ತಂಡಗಳ ಸ್ಪರ್ಧೆ ಪೂರ್ಣಗೊಂಡು, ಜೂನ್ 28ರಂದು ಅಂತಿಮ ಪಂದ್ಯಾಟ ಕಾಸರಗೋಡು ಪೊಲೀಸ್ ಮೈದಾನದ ಟರ್ಫ್ ಕೋರ್ಟ್‌ನಲ್ಲಿ ನಡೆಯಲಿದೆ.