ಬ್ರಹ್ಮಾವರದಲ್ಲಿ ಕ್ರೈಸ್ತರಿಂದ ಕಾಲ್ನಡಿಗೆ ಜಾಥಾ

jatha
ಫಾಧರ್ ನರೋನ್ಹ ಅವರ 88ನೇ ಪುಣ್ಯ ಸ್ಮರಣೆ ಪ್ರಯುಕ್ತ ನೂರಾರು ಕ್ರೈಸ್ತರು ಕಾಲ್ನಡಿಗೆ ಜಾಥಾ ನಡೆಸಿದರು
Published on

ಬ್ರಹ್ಮಾವರ: ಸ್ವಾತಂತ್ರೃಪೂರ್ವ ಕಾಲದಲ್ಲಿ ಬ್ರಹ್ಮಾವರ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಆರಂಭಿಸಿದ ಎಸ್‌ಎಂಎಸ್ ಆರ್ಥೊಡೆಕ್ಸ್ ಸಿರಿಯನ್ ಚರ್ಚ್‌ನ ಧರ್ಮಗುರು ಫಾದರ್ ನರೋನ್ಹ ಅವರ 88ನೇ ಪುಣ್ಯ ಸ್ಮರಣೆ ಸೋಮವಾರ ಜರುಗಿತು. ನೂರಾರು ಕ್ರೈಸ್ತರು ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಿಂದ ಎಸ್‌ಎಂಎಸ್ ಚರ್ಚ್ ತನಕ ಕಾಲ್ನಡಿಗೆ ಜಾಥಾ ನಡೆಸಿದರು. ಬಳಿಕ ಎಂ ಸಿ ಮಥಾಯಿ ನೇತೃತ್ವದಲ್ಲಿ ಒಂಬತ್ತು ಸಹಾಯಕ ಗುರುಗಳ ಸಹಭಾಗಿತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ಮುಂಬೈ, ಬೆಂಗಳೂರು, ಸಿದ್ದಾಪುರ, ಹುಲಿಕಲ್, ಕೊಳಲಗಿರಿ, ಕಂಡ್ಲೂರು ಸಹಿತ ರಾಜ್ಯದ ಹಲವು ಭಾಗಗಳಿಂದ ಕ್ರೈಸ್ತರು ಆಗಮಿಸಿದ್ದರು. ಟ್ರಸ್ಟಿಗಳಾದ ಮಿಲ್ಟನ್ ಒಲಿವೇರಾ, ಕಾರ್ಯದರ್ಶಿ ಲಾರೆನ್ಸ್ ಡಿಸೋಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net