

ಕಲಬುರಗಿ : ಕುಡಿವ ನೀರಿನ ಘಟಕವೊಂದರ ಮೇಲೆ ದಾಳಿ ಕುರಿತಂತೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಹಾಗೂ ಮಾಜಿ ಮೇಯರ್ ನಡುವೆ ದೂರವಾಣಿಯಲ್ಲಿ ಟಾಕ್‌ವಾರ್ ನಡೆದಿದೆ. ಇದು ಜಟಾಪಟಿಗೆ ಕಾರಣಾಗಿದೆ.
ಶಾಸಕರು ಹೇಳಿದರೂ ನೀವು ಅದನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರಿ ಎಂದು ಮಾಜಿ ಮೇಯರ್ ದೂರಿದರೆ, ಆ ಮಹಿಳಾ ಅಧಿಕಾರಿ ನೀವು ನನ್ನ ಕೆಲಸದಲ್ಲಿ ಮಧ್ಯ ಪ್ರವೇಶಿಸಬೇಡಿ,ನಮ್ಮ ಕೆಲಸ ಮಾಡಲು ಬಿಡಿ ಎಂದಾಗ ಮಾತಿನ ಚಕಮಕಿ ನಡೆದಿದೆ.
ಈ ಆಡಿಯೋ ಕುರಿತು ಮಹಿಳಾ ಅಧಿಕಾರಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ,ಮಾಜಿ ಮೇಯರ್ ಅವರು ಶಾಸಕರ ಹೆಸರು ಹೇಳಿಕೊಂಡು ದಬಾಯಿಸಿ ಮಾತನಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಸರ್ಕಾರ ಬದಲಾಗಿದೆ ಯೋಚಿಸಿ, ನಾನು ಜನ ಸೇವೆ ಮಾಡಿದ ವ್ಯಕ್ತಿಯಾಗಿz್ದೆÃನೆ ಎಂದು ಗದರಿಸಿದ್ದಾರೆ ಎಂದು ಹೇಳಿದರು. ಸುಮಾರು ನಾಲ್ಕು ನಿಮಿಷಗಳ ಇಬ್ಬರ ನಡುವೆ ಮಾತಿನ ವಿನಿಯಮ ಚಕಮಕಿ ನಡೆದಿದೆ. ಘಟಕದ ದಾಳಿಯ ಕುರಿತು ಮಾಹಿತಿ ಕೇಳಿz್ದÉÃನೆ, ಅದನ್ನೇ ಅವರು ತಪ್ಪಾಗಿ ಅರ್ಥೆÊಸಿಕೊಂಡಿದ್ದಾರೆ. ಅವರ ಆರೋಪ ಸುಳ್ಳು ಎಂದು ಮಾಜಿ ಮೇಯರ್ ಶರಣಕುಮಾರ ಸ್ಪಷ್ಟನೆ ನೀಡಿದ್ದಾರೆ.