

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತಾಧಿಕಾರಿಗಳ ಹುದ್ದೆಯನ್ನು ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳಿಗೆ ವಹಿಸಲು ಸರ್ಕಾರ ತಾತ್ವಿಕವಾಗಿ ಅನುಮೋದಿಸಿ ಆದೇಶ ಹೊರಡಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಅಡಿಯಲ್ಲಿ ಅಂಕಿತಾಧಿಕಾರಿಗಳ ಹುದ್ದೆಯ ಅಧಿಕಾರಗಳನ್ನು ಕಂದಾಯ ಇಲಾಖೆಯ ಆಯಾ ಪ್ರದೇಶದ ಉಪ ವಿಭಾಗಾಧಿಕಾರಿಗಳಿಗೆ ವಹಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದೆ.
ಈ ಆದೇಶವು ಉಪವಿಭಾಗಾಧಿಕಾರಿಗಳನ್ನು ಅಂಕಿತಾಧಿಕಾರಿಗಳಾಗಿ ಅಧಿಸೂಚಿಸಲು ಹೈಕೋರ್ಟ್ ನೀಡಿರುವ ನಿರ್ದೇಶನಗಳಿಗೆ ಬದ್ಧರಾಗಿತಕ್ಕದ್ದು. ಇವರಿಗೆ ಆಹಾರ ಪ್ರಾಧಿಕಾರ ನಿಗದಿಪಡಿಸಿದ ತರಬೇತಿ ನೀಡಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಕ್ರಮವಹಿಸಬೇಕು ಎಂದು ಆದೇಶದಲ್ಲಿ ಹೇಳಿದೆ.