ಆಹಾರ ಗುಣಮಟ್ಟ ಪರೀಕ್ಷೆ ಕಡ್ಡಾಯ

FotoJet
Published on

ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ನಿರ್ದೇಶನ

ರಾಮನಗರ : ಜಿಲ್ಲೆಯ ಬೀದಿಬದಿಗಳಲ್ಲಿ ವಾರಾಟ ವಾಡುವ ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಆಹಾರದ ಸುರಕ್ಷತೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಖಾತ್ರಿ ಪಡಿಸಬೇಕೆಂದು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಜಿಲ್ಲಾ ಅಂಕಿತ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ನಿರ್ದೇಶನ ನೀಡಿದರು.
ಅಪರ ಜಿಲ್ಲಾಧಿಕಾರಿ ಕೊಠಡಿಯಲ್ಲಿ ಸೋಮವಾರ ಆಯೋಜಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ವಾತನಾಡಿದರು. ಬೀದಿಬದಿಗಳಲ್ಲಿ ವಾರಾಟವಾಗುವ ಆಹಾರ ಪದಾರ್ಥಗಳು, ಆಹಾರ ಕೇಂದ್ರಗಳ ನೈರ್ಮಲ್ಯ ಮತ್ತು ಗುಣಮಟ್ಟ ಮತ್ತು ಸ್ಥಳೀಯ ವಿವಿಧ ಜನಪ್ರಿಯ ತಿಂಡಿಗಳನ್ನು ವಾರಾಟ ವಾಡುವ, ವಾರಾಟಗಾರರು, ಅಂಗಡಿಗಳು, ಸ್ಟಾಲ್‌ಗಳು ತಯಾರಿಸುವ ಆಹಾರಗಳ ಗುಣಮಟ್ಟ ಉತ್ತಮವಾಗಿರಬೇಕು ಎಂದರು.
ಒಮ್ಮೆ ಬಳಸಿ ಶೇಖರಿಸಿಟ್ಟ ಅಡುಗೆ ಎಣ್ಣೆಯನ್ನು ಮರು ಬಳಕೆ ವಾಡಿದರೆ ಅದರಿಂದ ಹೆಚ್ಚಿನ ಪ್ರವಾಣದಲ್ಲಿ ಆಲ್ಡಿಹ್ಶೆಡ್ ಎಂಬ ರಾಸಾಯನಿಕ ಬಿಡುಗಡೆ ಆಗುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಅದನ್ನು ಹೆಚ್ಚು ಕಾಲ ಸಂಗ್ರಹಿಸಿಡಬಾರದು. ಹೆಚ್ಚು ಕಾಲ ಕರಿದ ಎಣ್ಣೆಯನ್ನೇ ಅಡುಗೆಗೆ ಉಪಯೋಗಿಸುವುದರಿಂದ ಹೃದಯಸಂಬಂಧಿ, ನರ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಎಫ್‌ಎಸ್‌ಎಸ್‌ಎಐ ನಿಯಮಗಳಂತೆ ಅಡುಗೆಗೆ ಬಳಸುವ ಎಣ್ಣ್ಣೆಯಲ್ಲಿ ಟೋಟಲ್ ಪೋಲಾರ್ ಕಾಂಪಚಿಡ್ಸ್ (ಟಿಪಿಸಿ)ನ ಮಿತಿಯು ಗರಿಷ್ಠ ಶೇ.25 ಮೀರಬಾರದು ಎಂದರು.
ಕರಿದ ಪದಾರ್ಥಗಳನ್ನು ನ್ಯೂಸ್ ಪೇಪರ್, ಪ್ಲಾಸ್ಟಿಕ್‌ನಲ್ಲಿ ಸುತ್ತಿ ಕೊಡುವುದು ಅಪಾಯಕಾರಿಯಾಗಿದೆ. ಇಂತಹದ್ದು ಕಂಡರೆ ಸಂಬಂಧಪಟ್ಟ ನಗರ ಸಭೆಯೊಂದಿಗೆ ಅಂಕಿತ ಅಧಿಕಾರಿಗಳು ಅರಿವು ಮೂಡಿಸಿ ನಂತರದಲ್ಲಿ ರೈಡ್ ವಾಡಬೇಕು ಎಂದರು.
ಜಿಲ್ಲೆಯ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಮತ್ತು ಆಹಾರ ತಯಾರಿಕೆ ಸುರಕ್ಷತೆ ಬಗ್ಗೆ ತಪ್ಪದೆ ಪರಿಶೀಲನೆ ನಡೆಸಬೇಕು ಎಂದರು.
ಆಹಾರ ಸುರಕ್ಷತೆಯ ಅಧಿಕಾರಿ ಡಾ.ಚಂದ್ರಶೇಖರ್, ಆರ್.ಸಿ.ಎಚ್ ಅಧಿಕಾರಿ ಡಾ.ರಾಜು, ನಗರಸಭೆ ಆಯುಕ್ತ ಜಯಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುರಕ್ಷಾ ಕ್ರಮ ಪರಿಶೀಲಿಸಿ
ಜಿಲ್ಲೆಯ ದಿನಸಿ ಅಂಗಡಿಗಳಲ್ಲಿ ತಂಬಾಕು ವಾರಾಟ ವಾಡುತ್ತಿಸದ್ದರೆ ಅಂತಹ ಅಂಗಡಿಗಳ ಮೇಲೆ ರೈಡ್ ವಾಡಬೇಕು. ಹೋಟೆಲ್‌ಗಳು, ಬೇಕರಿಯೊಳಗೆ ಹೋಗಿ ಆಹಾರ ಸುರಕ್ಷತೆ ಬಗ್ಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಬೇಕು ಹಾಗೂ ಕ್ರಮ ಕೈಗೊಳ್ಳದೆ ಇದ್ದರೆ ದಂಡ ವಿಧಿಸಬೇಕು. ಕೊಬ್ಬರಿ ಎಣ್ಣೆ ಸೇರಿ ಖೋವಾ ಸಿದ್ಧಪಡಿಸುವ ಸ್ಥಳಗಳಿಗೆ ಅನೀರಿಕ್ಷಿತ ಭೇಟಿ ನೀಡಿ ತಪಾಸಣೆ ವಾಡಬೇಕು. ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಕೆ ನಿಷೇಧಿಸಲಾಗಿದ್ದು, ಅದರ ಉಲ್ಲಂನೆ ಕಂಡುಬಂದಿದಿಯೇ ಎಂಬುದನ್ನು ತಪಾಸಣೆ ನಡೆಸಬೇಕು ಎಂದು ಎಡಿಸಿ ತಿಳಿಸಿದರು. ಜಿಲ್ಲೆಯ 2 ಹೋಟೆಲ್‌ಗಳ ಮೇಲೆ ರೈಡ್ ವಾಡಲಾಗಿದೆ ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ. ರೋಚನಾ ತಿಳಿಸಿದರು.

ಕೃತಕ ಬಣ್ಣಸಿದರೆ ಕ್ರಮ
ಸ್ವಚ್ಛತೆ ಇಲ್ಲದೆ ಇದ್ದರೆ ಆಹಾರ ಪದಾರ್ಥಗಳಿಗೆ ಹುಳು ಬೀಳುವ ಸಾಧ್ಯತೆ ಇದ್ದು, ಅದಕ್ಕಾಗಿ ಕೆಎಸ್‌ಎಫ್‌ಸಿ ಗೋದಾಮುಗಳಲ್ಲಿ ಪರಿಶೀಲನೆ ನಡೆಸಬೇಕು. ಜಿಲ್ಲೆಯ ಎಲ್ಲ ಅಂಗನವಾಡಿಗಳಲ್ಲಿ ಆಹಾರ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು ಎಂದು ಎಡಿಸಿ ಚಂದ್ರಯ್ಯ ಸೂಚಿಸಿದರು. ವೆಜ್, ಚಿಕನ್, ಫಿಶ್ ಇತರ ಕಬಾಬ್‌ಗಳ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸುವುದನ್ನು ನಿಬರ್ಂಧಿಸಲಾಗಿದೆ. ಉಲ್ಲಂನೆಯ ಪ್ರಕರಣಗಳು ಕಂಡು ಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು 10ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದ್ದು, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬಹುದಾಗಿದೆ ಎಂದು ತಿಳಿಸಿದರು.
ಖಾಸಗಿಯಾಗಿ ಆಹಾರ ಸಿದ್ಧಪಡಿಸುವರು ಅಲ್ಲಿನ ಸ್ವಚ್ಛತೆ ಹಾಗೂ ಸುರಕ್ಷತೆ ಬಗ್ಗೆ ಗಮನ ಹರಿಸಲು ತಾಕೀತು ವಾಡಬೇಕು. ಅವರನ್ನೆಲ್ಲ ನೋಂದಾಯಿಸಲು ಅರಿವು ಮೂಡಿಸಬೇಕು, ಕಡ್ಡಾಯವಾಗಿ ಕ್ರಮವಹಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net