

ಅಳವಂಡಿ: ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಕಳೆದ ನಾಲ್ಕು ದಿನದಿಂದ ಅಳವಂಡಿಯಲ್ಲಿ ನಡೆಯುತ್ತಿದ್ದ ಗುರ್ಜಿಪೂಜೆ ಗುರುವಾರ ರಾತ್ರಿ ಅನ್ನ ಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.
ನಾಲ್ಕು ದಿನದ ಹಿಂದೆ ಮಣ್ಣು ಅಥವಾ ಸೆಗಣಿಯಿಂದ ನಿರ್ಮಿಸಿದ ಗುರ್ಜಿಯನ್ನು ತಲೆಯ ಮೇಲೆ ಹೊತ್ತ ಮಕ್ಕಳು ಗ್ರಾಮದ ಮನೆ ಮನೆಗೂ ತೆರಳಿ ಗುರ್ಜಿ ಹಾಗೂ ಜಾನಪದ ಹಾಡು ಹಾಡುತ್ತ ಮೈಮೇಲೆ ನೀರು ಹಾಕಿಸಿಕೊಂಡು ಪೂಜೆಗೊಳಾಗದರು. ಈ ವೇಳೆ ಗ್ರಾಮಸ್ಥರಿಂದ ಸಂಗ್ರಹವಾದ ದವಸ ಧಾನ್ಯ ಮತ್ತು ಹಣದಿಂದ ಅನ್ನಸಂತರ್ಪಣೆ ನಡೆಸಿ ಮಳೆ ಪೂಜೆ ಸಂಪನ್ನಗೊಳಿಸಲಾಯಿತು.
ಮರುಳಾರಾಧ್ಯ ಶಿವಾಚಾರ್ಯ ಮಾತನಾಡಿ, ಮುಂಗಾರು ಪೂರ್ವದಲ್ಲಿ ಅಬ್ಬರಿಸಿದ ಮಳೆರಾಯ ಬಿತ್ತನೆ ಬಳಿಕ ಸ್ತಬ್ಧಗೊಂಡಿದ್ದರಿಂದ ರೈತರು ಆತಕಂಕಕ್ಕೆ ಒಳಗಾಗಿದ್ದಾರೆ. ವರುಣ ದೇವ ಶೀಘ್ರ ಕೃಪೆ ತೋರಲಿ ಎಂದು ಪ್ರಾರ್ಥಿಸಿದರು.
ಪ್ರಮುಖರಾದ ದೇವಪ್ಪ ಕಟ್ಟಿಮನಿ, ಭಿಮರಡ್ಡೆಪ್ಪ ಗದ್ದಿಕೇರಿ, ಜಗನ್ನಾಥರಡ್ಡಿ, ಶಿವಗ್ಯನಪ್ಪ ನಿಲಿಹಿಂಡರ, ಮಲ್ಲಿಕಾರ್ಜುನ, ಸಿದ್ದಣ್ಣ ಕೋರಿಶೇಟ್ಟರ, ಪರಮೇಶಪ್ಪ, ಸಿದ್ದಯ್ಯ, ಶರಣಪ್ಪ, ಜಗನ್ನಾಥ, ಮಂಜುನಾಥ, ಶಿವಪ್ರಕಾಶ, ಸಿದ್ದಮ್ಮ, ಅನ್ನಮ್ಮ, ಅಕ್ಕಮ್ಮ, ಪಾರಮ್ಮ, ಮಂಜಮ್ಮ, ಈರಮ್ಮ, ಗಂಗಮ್ಮ, ಬಸಣ್ಣ, ಶರಣಪ್ಪ, ಶಿವಾನಂದಯ್ಯ, ರಾಮಣ್ಣ, ರಾಜಪ್ಪ, ಶಾಂತವೀರಯ್ಯ, ಶಂಬುಲಿಂಗಯ್ಯ ಇತರರು ಇದ್ದರು.