ವಿಶ್ವಕರ್ಮನ ಆದರ್ಶ ಪರಿಪಾಲಿಸಿ

20 klg 2- vishwakarma
Published on

ಕಲಘಟಗಿ: ವಿಶ್ವಕರ್ಮ ಸಮಾಜವನ್ನು ಸಂಘಟನೆ ಮಾಡುವುದರೊಂದಿಗೆ ವಿಶ್ವಕರ್ಮನ ಆದರ್ಶಗಳನ್ನು ಪರಿಪಾಲನೆ ಮಾಡಬೇಕು ಎಂದು ಗ್ರೇಡ್-2 ತಹಸೀಲ್ದಾರ್ ಬಸವರಾಜ ಹೊಂಕಣ್ಣವರ ಹೇಳಿದರು.


ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ವಿಶ್ವಕರ್ಮ ಸಮಾಜದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಕರ್ಮ ಜಯಂತಿಯಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.


ತಾಪಂ ಇಒ ಪಿ.ವೈ. ಸಾವಂತ, ಆರ್.ಡಿ. ಬಡಿಗೇರ, ಸಿ.ಆರ್. ಪತ್ತಾರ, ರಮೇಶ ಹೊಲ್ತಿಕೋಟಿ, ಅಶೋಕ ಅರ್ಕಸಾಲಿ, ಶರಣಪ್ಪ ಉಣಕಲ್, ತಾಲೂಕು ವಿಶ್ವಕರ್ಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಬಡಿಗೇರ, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾರಾಯಣ ಬಡಿಗೇರ, ಉಪಾಧ್ಯಕ್ಷ ಮಲ್ಲಪ್ಪ ಬಡಿಗೇರ, ರವಿ ಕೆ ಬಡಿಗೇರ, ಶೇಖಣ್ಣ ಬಡಿಗೇರ, ಮಾರುತಿ ಬಡಿಗೇರ, ಅಶೋಕ ಬಡಿಗೇರ, ಈಶ್ವರ ಬಡಿಗೇರ, ಶ್ರೀಪಾದ ಬಡಿಗೇರ, ಫಕೀರಪ್ಪ ಬಡಿಗೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net