ರಾಜ್ಯ ಶಾಲಾ ಶಿಕ್ಷಣ ಆಯುಕ್ತರ ಆದೇಶ | ಹೆಚ್ಚುಕಡಿಮೆ ಆದರೇ ಶಾಲಾ ಮುಖ್ಯಸ್ಥರೇ ಕಾರಣ
ವಿಜಯವಾಣಿ ಸುದ್ದಿಜಾಲ ಯಾದಗಿರಿ
ವಿದ್ಯಾರ್ಥಿಗಳ ಶಾಲಾ ಶೈಕ್ಷಣಿಕ ಪ್ರವಾಸ ರದ್ದು ಪಡಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಶಾಲಾ ಶಿಕ್ಷಣ ಇಲಾಖೆ, ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬುತ್ತಿರುವ ಸುದ್ದಿಗಳನ್ನೇ ನಂಬಬಾರದೆAದು ಹೇಳಿದೆ. ಇದೇ ವೇಳೆ ಪ್ರವಾಸಕ್ಕೆ ಹೋಗುವ ಶಾಲೆಗಳ ಮುಖ್ಯಸ್ಥರು ಇಲಾಖೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ.
ಪ್ರವಾಸಕ್ಕೆ ಹೊಸ ನಿಯಮಗಳನ್ನು ಕಳೆದ ಡಿ.೧೨ರಂದು ಜಾರಿಗೊಳಿಸಿರುವ ಇಲಾಖೆ, ಪ್ರವಾಸಕ್ಕೆ ಹೋಗುವ ಮುನ್ನ ಪೂರ್ವಭಾಗಿ ತಯಾರಿ ಮಾಡಿಕೊಂಡು ಅದರಂತೆ ಪ್ರವಾಸ ಕೈಗೊಳ್ಳಬೇಕು, ಯಾವುದೇ ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು, ಎಲ್ಲ ಸ್ಥಳಗಳಲ್ಲಿ ಮತ್ತು ಸಂದರ್ಭಗಳಲ್ಲಿ ಪ್ರವಾಸದ ಉಸ್ತುವಾರಿ ವಹಿಸಿರುವ ಸಿಬ್ಬಂದಿ ವಿದ್ಯಾರ್ಥಿಗಳ ಜತೆಗಿದ್ದು, ಅವರ ಸುರಕ್ಷತೆ ಮತ್ತು ಎಲ್ಲ ಅವಶ್ಯಕ್ರಮಗಳನ್ನು ಕೈಗೊಳ್ಳಬೇಕು.ಈ ವೇಳೆ ವಿದ್ಯಾರ್ಥಿಗಳಿಗೆ ಸಂಬAಧಿಸಿದAತೆ ಉಂಟಾಗುವ ಯಾವುದೇ ಅವಘಡ, ಹಾನಿಗೆ ಸಂಬAಧಿಸಿದAತೆಯೇ ಶಾಲಾ ಮುಖ್ಯಸ್ಥರು ಮತ್ತು ಶಾಲಾ ಪ್ರವಾಸದ ಉಸ್ತುವಾರಿ ವಹಿಸಿರುವ ಸಿಬ್ಬಂದಿಯವರೇ ಜವಾಬ್ದಾರರಾಗುತ್ತಾರೆಂದು ರಾಜ್ಯ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರವಾಸಕ್ಕೆ ಹೊಗುವ ಶಾಲೆ ಮುಖ್ಯಸ್ಥರು ತಪ್ಪದೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮತಿ ಪಡೆದು, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಗೆ ಕಡ್ಡಾಯವಾಗಿ ನೀಡಿ ಅನುಮೋದನೆ ಪಡೆದಿರಬೇಕು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ರಾಜ್ಯ ಪ್ರವಾಸೋದ್ಯಮ ಇಲಾಖೆಗಳ ವಾಹನಗಳಲ್ಲಿಯೇ ಕಡ್ಡಾಯವಾಗಿ ಪ್ರವಾಸಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಖಾಸಗಿ ಹಾಗೂ ಮಿನಿ ಬಸ್‌ಗಳಲ್ಲಿ ಪ್ರವಾಸ ಕೈಗೊಳ್ಳಬಾರದು ಮತ್ತು ಪ್ರವಾಸದ ವೇಳೆ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ನಿಯೋಜಿತ ಮಹಿಳಾ ಶಿಕ್ಷಕರೇ ಕಡ್ಡಾಯವಾಗಿ ನೋಡಿಕೊಳ್ಳಬೇಕೆಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಕನಕಪ್ಪಗೇ ನೋಟಿಸ್ ಜಾರಿ
ತಾಲೂಕಿನ ವೆಂಕಟೇಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಕನಕಪ್ಪ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಬಿ.ಪಾಟೀಲ್ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ವಿದ್ಯಾರ್ಥಿಗಳೊಂದಿಗೆ ತೆರಳಿದ್ದ ಈ ಮುಖ್ಯಗುರುಗಳು, ಅಲ್ಲಿಪುರದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿದ್ದಾರೆಂಬ ಮಾಹಿತಿ ಮೇರೆ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅವರೇ ಖುದ್ದಾಗಿ ಬಿಇಒ ಕಚೇರಿಗೆ ಆಗಮಿಸಿ ನೋಟಿಸ್ ಪತ್ರ ತೆಗೆದುಕೊಂಡಿದ್ದು, ಅದಕ್ಕೆ ಅವರಿಂದ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
----