

ಪೀಣ್ಯ ದಾಸರಹಳ್ಳಿ: ಜಾನಪದಕ್ಕೆ ಯಾವುದೇ ಜಾತಿ, ಮತ, ಧರ್ಮ ಇಲ್ಲ. ಜಾನಪದ ತನ್ನದೇ ಆದ ವೈಶಿಷ್ಟತೆ ಹೊಂದಿದ್ದು, ಅನಾದಿ ಕಾಲದಿಂದಲೂ ಕಲೆಗಳಿಗೆ ಜೀವ ತುಂಬಿದೆ. ಜಾನಪದವೆಂಬ ನುಡಿಸಿರಿಯ ತೇರು ನಮ್ಮ ಮೂಲ ಸಂಸತಿಯ ಬೇರು ಎಂದು ಕನ್ನಡ ಜಾನಪದ ಪರಿಷತ್ ಸಂಸ್ಥಾಪಕ ಡಾ. ಎಸ್.ಬಾಲಾಜಿ ತಿಳಿಸಿದರು.
ಹಾವನೂರು ಬಡಾವಣೆಯ ಅಸೆಂಟ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕನ್ನಡ ಜಾನಪದ ಪರಿಷತ್ನ ದಾಸರಹಳ್ಳಿ ಟಕ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಜಾನಪದ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯಾದ್ಯಂತ ನೂರಾರು ಕಾರ್ಯಕ್ರಮಗಳನ್ನು ಸಂಟಿಸಿ, ಸ್ಥಳಿಯ ಜನಪದ ಕಲಾವಿದರ ಕನಸುಗಳಿಗೆ ಜೀವ ತುಂಬುವ ಕೆಲಸವನ್ನು ಪರಿಷತ್ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಹ್ಯೂಮನ್ ರೈಟ್ಸ್ ಪೊಟೆನ್ ಕಮಿಟಿ ಅಧ್ಯ ಬಿ.ಎಂ.ಚಿಕ್ಕಣ್ಣ ಮಾತನಾಡಿ, ಸರ್ಕಾರ ಹೆಚ್ಚಿನ ರೀತಿಯಲ್ಲಿ ಕನ್ನಡ ಜಾನಪದ ಕಲಾವಿದರಿಗೆ ಪೋತ್ಸಾಹ ನೀಡಬೇಕು. ಈ ಮೂಲಕ ಜನಪದ ಕಲೆ, ಸಂಸತಿ, ಪರಂಪರೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ಈ ವೇಳೆ ಡೊಳ್ಳು ಕುಣಿತ, ಸೋಬಾನೆ ಪದಗಳು, ಜಾನಪದ ಗೀತೆಗಳು, ನೃತ್ಯ ಪ್ರದರ್ಶನ ಕಾರ್ಯಕ್ರಮ ಜರುಗಿತು. ಜನಪದ ಸಂಶೋಧಕ ಡಾ.ಚಿಕ್ಕ ಹೆಜ್ಜಾಜಿ ಮಹಾದೇವ್ ಜನಪದ ಪ್ರಕಾರಗಳಾದ ಗಾಯನ, ನೃತ್ಯ, ಗಾದೆ ಮತ್ತು ಒಗಟುಗಳ ಬಗ್ಗೆ ವಿಶ್ಲೇಷಿಸಿದರು.